ಬೆಂಗಳೂರು ಕರಗ ನೋಡಲು ಬಂದಿದ್ದ ವ್ಯಕ್ತಿ ಫ್ಲೈ ಓವರ್​ನಿಂದ ಬಿದ್ದು ಸಾವು

ಹೊಸದಿಗಂತ ಡಿಜಿಟಲ್‌ ಡೆಸ್ಕ್‌: 

ನಿನ್ನೆ ಬೆಂಗಳೂರು ಕರಗ ಮಹೋತ್ಸವ ಸಂಪನ್ನವಾಗಿದೆ. ಕರಗ ನೋಡಿ ವಾಪಾಸಾಗುತ್ತಿದ್ದ ವೇಳೆ ವ್ಯಕ್ತಿಯೊಬ್ಬ ಬ್ರಿಡ್ಜ್‌ನಿಂದ ಬಿದ್ದು ಮೃತಪಟ್ಟಿದ್ದಾರೆ.

ಉಪ್ಪಾರಪೇಟೆ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ನಡೆದಿದ್ದು, ಆನಂದ್ ರಾವ್ ಸರ್ಕಲ್​ನ ಫ್ಲೈ ಓವರ್​ನಿಂದ ಬಿದ್ದು ವ್ಯಕ್ತಿ ಮೃತಪಟ್ಟಿದ್ದಾರೆ.

ಈವರೆಗೂ ಮೃತರ ಗುರುತು ಪತ್ತೆಯಾಗಿಲ್ಲ. ಮೂರು ದಿನಗಳ ನಡೆಯುವ ಕರಗ ಉತ್ಸವವನ್ನು ನೋಡಲು ಇವರು ಬಂದಿದ್ದರು. ಬ್ರಿಡ್ಜ್‌ ಮೇಲಿಂದ ಬಿದ್ದು ಆತ್ಮಹತ್ಯೆ ಮಾಡಿಕೊಂಡಿದ್ದಾರಾ ಅಥವಾ ಯಾರಾದರೂ ತಳ್ಳಿದ್ದಾರಾ ಎನ್ನುವ ಬಗ್ಗೆ ಪೊಲೀಸರು ಪರಿಶೀಲನೆ ನಡೆಸುತ್ತಿದ್ದಾರೆ.

 

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!