Thursday, February 9, 2023

Latest Posts

ದಂಡ ಕಟ್ಟು ಎಂದ ಟ್ರಾಫಿಕ್ ಪೊಲೀಸ್‌ಗೆ ಕಾರಿನಿಂದ ಡಿಕ್ಕಿ: 4 ಕಿ.ಮೀ ಎಳೆದೊಯ್ದ ವ್ಯಕ್ತಿ

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌ 

ಮಧ್ಯಪ್ರದೇಶದ ಇಂದೋರ್ ನಲ್ಲಿ ವ್ಯಕ್ತಿಯೊಬ್ಬರು ದಂಡ ಪಾವತಿ ಮಾಡಿ ಎಂದ ಟ್ರಾಫಿಕ್‌ ಪೊಲೀಸ್‌ಗೆ ಡಿಕ್ಕಿ ಹೊಡೆದು 4 ಕಿ.ಮೀ ಎಳೆದೊಯ್ದಿರುವ ಘಟನೆ ನಡೆದಿದೆ. ಫೋನ್‌ನಲ್ಲಿ ಮಾತನಾಡುತ್ತಾ ಕಾರು ಚಲಾಯಿಸುತ್ತಿದ್ದ ವ್ಯಕ್ತಿಯನ್ನು ಸಿಗ್ನಲ್‌ನಲ್ಲಿ ಟ್ರಾಫಿಕ್ ಪೊಲೀಸರು ನಿಲ್ಲಿಸಿ, ದಂಡ ಕಟ್ಟುವಂತೆ ಹೇಳಿದ್ದಾರೆ. ಈ ವೇಳೆ ಪೊಲೀಸರಿಗೆ ಆವಾಜ್‌ ಹಾಕಿ ಎಸ್ಕೇಪ್‌ ಆಗಲು ಯತ್ನಿಸಿದ್ದಾನೆ. ಅನುಮಾನಗೊಂಡು ಕಾರನ್ನು ಪರಿಶೀಲಿಸಿದಾಗ ಬಂದೂಕು ಮತ್ತು ಗುಂಡುಗಳು ಪತ್ತೆಯಾಗಿವೆ. ಕೂಡಲೇ ಪೊಲೀಸ್ ಅಧಿಕಾರಿ ಕಾರಿಗೆ ಅಡ್ಡವಾಗಿ ನಿಂತಿದ್ದಾರೆ.

ಎದುರು ನಿಂತ ಪೊಲೀಸ್‌ ಅಧಿಕಾರಿ ಡಿಕ್ಕಿ ಹೊಡೆದ ಕೂಡಲೇ ಪೊಲೀಸ್ ಬಾನೆಟ್‌ ಗಟ್ಟಿಯಾಗಿ ಹಿಡಿದುಕೊಂಡಿದ್ದಾರೆ. ಆ ವ್ಯಕ್ತಿ ಕಾರು ನಿಲ್ಲಿಸದೆ ಓಡಿಸುವ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದೆ. ಕರ್ತವ್ಯ ನಿರತ ಟ್ರಾಫಿಕ್ ಪೊಲೀಸರನ್ನು ಶಿವಸಿಂಗ್ ಚೌಹಾಣ್ ಎಂದು ಗುರುತಿಸಲಾಗಿದ್ದು, ಕಾರಿನ ಚಾಲಕನನ್ನು ಗ್ವಾಲಿಯರ್‌ನ ಕೇವಾಶ್ ಉಪಾಧ್ಯಾಯ ಎಂದು ಗುರುತಿಸಲಾಗಿದೆ.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Latest Posts

Don't Miss

error: Content is protected !!