ಹೊಸದಿಗಂತ ಡಿಜಿಟಲ್ ಡೆಸ್ಕ್:
ಬೆಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ಕಸ್ಟಮ್ಸ್ ಅಧಿಕಾರಿಗಳು ಶುಕ್ರವಾರ ನಡೆಸಿದ ಕಾರ್ಯಾಚರಣೆಯಲ್ಲಿ ಒಟ್ಟು 77.57 ಲಕ್ಷ ರೂ. ಮೌಲ್ಯದ ಚಿನ್ನವನ್ನು ವಶಕ್ಕೆ ಪಡೆದಿದ್ದಾರೆ.
ಜುಲೈ 3 ರಂದು ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣದ ಟರ್ಮಿನಲ್ 2 ಗೆ ದುಬೈನಿಂದ EK 566 ವಿಮಾನ ಮೂಲಕ ಬಂದ ವ್ಯಕ್ತಿ ಒಳ ಉಡುಪಿನಲ್ಲಿ 1092.5 ಗ್ರಾಂ ಚಿನ್ನವನ್ನು ಕಳ್ಳಸಾಗಣೆ ಮಾಡುತ್ತಿದ್ದ. ಆತ ಯಾರಿಗೂ ತಿಳಿಯದಂತೆ ಒಳ ಉಡುಪಿನಲ್ಲಿ ಬಂಗಾರ ಬಚ್ಚಿಟ್ಟುಕೊಂಡಿದ್ದ.
ಬಂಧಿತ ವ್ಯಕ್ತಿ ಬೊಮ್ಮನಹಳ್ಳಿ ನಿವಾಸಿಯಾಗಿದ್ದು, ಮೊದಲ ಬಾರಿಗೆ ವಿದೇಶಕ್ಕೆ ಪ್ರಯಾಣಿಸಿದ್ದ. ಇಮ್ಮಿಗ್ರೇಷನ್ ಕ್ಲಿಯರೆನ್ಸ್ ಬಳಿಕ ವ್ಯಕ್ತಿಯ ನಡಳಿಕೆ ಅನುಮಾನಾಸ್ಪವಾಗಿ ಕಂಡು ಬಂದ ಹಿನ್ನೆಲೆಯಲ್ಲಿ ಅಧಿಕಾರಿಗಳು ಆತನನ್ನು ವಶಕ್ಕೆ ಪಡೆದು, ತಪಾಸಣೆ ನಡೆಸಿದ್ದಾರೆ. ಒಳಉಡುಪಿನಲ್ಲಿ ಚೀಲ ಕಂಡುಬಂದಿದ್ದು. ಚಿನ್ನ ಕಳ್ಳಸಾಗಣೆ ಮಾಡುತ್ತಿರುವುದು ತಿಳಿದುಬಂದಿದೆ. ಪೇಸ್ಟ್ ರೀತಿಯ ಚಿನ್ನವನ್ನು ಎರಡು ಆಯತಾಕಾರದ ಬಿಳಿ-ಟೇಪ್ ಪ್ಯಾಕೆಟ್‌ಗಳಲ್ಲಿ ಒಳಉಡುಪಿನಲ್ಲಿ ಇರಿಸಿರುವುದು ಕಂಡು ಬಂದಿದೆ.