ಹೊಸದಿಗಂತ ವರದಿ ಅಂಕೋಲಾ:
ಮೀನುಗಾರಿಕೆ ನಡೆಸುತ್ತಿದ್ದ ಸಂದರ್ಭದಲ್ಲಿ ದೋಣಿಯಿಂದ ಸಮುದ್ರಕ್ಕೆ ಬಿದ್ದು ಮೀನುಗಾರ ಮೃತ ಪಟ್ಟ ಘಟನೆ ತಾಲೂಕಿನ ಕೇಣಿ ಹರಿಕಂತ್ರವಾಡದಲ್ಲಿ ಸಂಭವಿಸಿದೆ.
ಹರಿಕಂತ್ರ ಕೇಣಿ ನಿವಾಸಿ ಚಾಂದು ಹೊನ್ನಪ್ಪ ಹರಿಕಂತ್ರ (56) ಮೃತ ವ್ಯಕ್ತಿಯಾಗಿದ್ದು ಬೆಳಿಗ್ಗಿನ ಜಾವ ಮನೆಯ ಸಮೀಪದ ಕಡಲ ತೀರದಲ್ಲಿ ಮೀನುಗಾರಿಕೆಗೆ ತೆರಳಿದ ಈತ ಪಾತಿ ದೋಣಿಯಲ್ಲಿ ಸಾಂಪ್ರದಾಯಿಕ ಮೀನುಗಾರಿಕೆಗೆ ನಡೆಸುತ್ತಿದ್ದ ಸಂದರ್ಭದಲ್ಲಿ ಆಯತಪ್ಪಿ ದೋಣಿಯಿಂದ ಸಮುದ್ರಕ್ಕೆ ಬಿದ್ದು ನೀರಿನಲ್ಲಿ ಮುಳುಗಿದ್ದು ಇತರ ಮೀನುಗಾರರು ತಕ್ಷಣ ಮೇಲೆತ್ತಿ ಅಂಕೋಲಾ ಸರ್ಕಾರಿ ಆಸ್ಪತ್ರೆಗೆ ಸಾಗಿಸದರಾದರೂ ವ್ಯಕ್ತಿ ಮೃತ ಪಟ್ಟಿರುವುದಾಗಿ ವೈದ್ಯರು ದೃಢೀಕರಿಸಿರುವುದಾಗಿ ತಿಳಿದು ಬಂದಿದೆ.
ಈ ಕುರಿತು ಅಂಕೋಲಾ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದ್ದು ಅಂಕೋಲಾ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ.