ಸ್ಯಾಮಸಂಗ್‌ ಗಿಂತಲೂ ಹೆಚ್ಚಿನ ಸ್ಮಾರ್ಟ್‌ ವಾಚ್‌ ಮಾರಾಟಮಾಡಿವೆ ಭಾರತದ ಈ ಎರಡು ಕಂಪನಿಗಳು!

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌

ಭಾರತದಲ್ಲಿ ಸ್ಮಾರ್ಟ್‌ ವಾಚ್‌ ನಂತಹ ಧರಿಸುವ ಸಾಧನಗಳಿಗೆ ( ವೇರೆಬಲ್ಸ್)‌ ಬೇಡಿಕೆ ದಿನೇ ದಿನೇ ಹೆಚ್ಚುತ್ತಿದ್ದು ಎಲ್ಲರೂ ಸ್ಮಾರ್ಟ್‌ ಆಗುತ್ತಿದ್ದಾರೆ. ಹೀಗಾಗಿ ದೇಶದಲ್ಲಿ ವೇರೆಬಲ್ಸ್‌ ಸಾಧನಗಳ ಮಾರಾಟವೂ ವರ್ಷದಿಂದ ವರ್ಷಕ್ಕೆ ಗಣನೀಯವಾಗಿ ಹೆಚ್ಚುತ್ತಿದೆ. ಈ ಹಿನ್ನೆಲೆಯಲ್ಲಿ ಅನೇಕ ವೇರೇಬಲ್ಸ್‌ ಸಾಧನಗಳ ಉತ್ಪಾದಕರು ಹುಟ್ಟಿಕೊಂಡಿದ್ದು ಇದೀಗ ಭಾರತೀಯ ಮೂಲದ ಎರಡು ಕಂಪನಿಗಳು ಜಾಗತಿಕ ದಿಗ್ಗಜ ಸ್ಯಾಮಸಂಗ್‌ ಕಂಪನಿಗಿಂತಲೂ ಹೆಚ್ಚಿನ ವಾಚ್‌ ಗಳನ್ನು ಮಾರಾಟ ಮಾಡಿವೆ.

ಕೌಂಟರ್‌ಪಾಯಿಂಟ್ ರಿಸರ್ಚ್‌ನ ವರದಿಯ ಪ್ರಕಾರ, ಜಾಗತಿಕ ಸ್ಮಾರ್ಟ್‌ವಾಚ್ ಸಾಗಣೆಗಳು 2022 ರಲ್ಲಿ 12 ಶೇ. ಬೆಳವಣಿಗೆಯನ್ನು ವರದಿ ಮಾಡಿದೆ. ಕೋವಿಡ್‌ ಸಮಯದಲ್ಲಿ ಹೃದಯ ಬಡಿತ (HR), ಆಮ್ಲಜನಕ ಪ್ರಮಾಣ (SpO2) ಪರೀಕ್ಷಿಸುವ ಅಭ್ಯಾಸ ಬೆಳೆದ ಪರಿಣಾಮ ಸ್ಮಾರ್ಟ್‌ ವಾಚ್‌ ಗಳು ಪ್ರಾಮುಖ್ಯತೆ ಪಡೆದುಕೊಳ್ಳುತ್ತಿವೆ. ಹೀಗಾಗಿ ಜನರು ಸ್ಮಾರ್ಟ್‌ ವಾಚ್‌ಗಳತ್ತ ಆಸಕ್ತಿ ತೋರುತ್ತಿದ್ದಾರೆ. ಇದೀಗ ಭಾರತ ಮೂಲದ ವೇರೆಬಲ್ಸ್‌ ಸಾಧನಗಳ ಕಂಪನಿಗಳಾದ ನೋಯ್ಸ್‌ (Noise)ಹಾಗೆಯೇ ಫೈರ್‌ ಬೋಲ್ಟ್‌ ಕಂಪನಿಗಳು ಅತಿ ಹೆಚ್ಚಿನ ಮಾರಾಟ ಕಂಡು ಈ ವಲಯದಲ್ಲಿ ವಿಶ್ವದ ಟಾಪ್‌ 5 ರ ಸಾಲಿಗೆ ಸೇರಿವೆ.

2022ರ ಮೂರನೇ ತ್ರೈಮಾಸಿಕದಲ್ಲಿ ಇವುಗಳು ಬರೋಬ್ಬರಿ 171 ಶೇಕಡಾ ಬೆಳವಣಿಗೆಯನ್ನು ದಾಖಲಿಸಿವೆ. ನಾಯ್ಸ್ ಮತ್ತು ಫೈರ್ ಬೋಲ್ಟ್ ಅತ್ಯಧಿಕ ಮಾರುಕಟ್ಟೆ ಪಾಲನ್ನು ಹೊಂದಿರುವ ಅಗ್ರ ಐದು ಕಂಪನಿಗಳ ಸಾಲಿಗೆ ಸೇರಿಕೊಂಡಿದೆ. ಮಾರುಕಟ್ಟೆ ಪಾಲನ್ನು ಗಮನಿಸುವುದಾದರೆ ಆಪಲ್ ಸ್ಮಾರ್ಟ್ ವಾಚ್ ಮಾರುಕಟ್ಟೆಯಲ್ಲಿ ಪ್ರಾಬಲ್ಯವನ್ನು ಹೊಂದಿದ್ದು ನಂತರದ ಸ್ಥಾನದಲ್ಲಿ ಸ್ಯಾಮ್ಸಂಗ್‌, ಹುವೈ, ನಾಯ್ಸ್ ಮತ್ತು ಫೈರ್ ಬೋಲ್ಟ್ ಕಂಪನಿಗಳಿವೆ. ಸ್ಯಾಮ್‌ ಸಂಗ್ 9 ಶೇಕಡಾ ಮಾರುಕಟ್ಟೆ ಪಾಲು ಹೊಂದಿದೆ. ನಂತರದಲ್ಲಿ ನೋಯ್ಸ್‌ (Noise) 5.6 ಶೇಕಡಾ ಹಾಗೆಯೇ ಫೈರ್‌ ಬೋಲ್ಟ್5.5 ಶೇಕಡಾ ಮಾರುಕಟ್ಟೆ ಪಾಲು ಹೊಂದಿದ್ದು ಇವೆರಡೂ ಸೇರಿ ಸ್ಯಾಮ್‌ ಸಂಗ್‌ ಮಾರಾಟವನ್ನು ಕಡಿಮೆಗೊಳಿಸಿವೆ.

ಭಾರತವು 2022 ರಲ್ಲಿ ಎರಡನೇ ಅತಿದೊಡ್ಡ ಸ್ಮಾರ್ಟ್‌ವಾಚ್‌ ಮಾರುಕಟ್ಟೆಯಾಗಿ ಹೊರಹೊಮ್ಮಿದೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!