ಹೊಸದಿಗಂತ ವರದಿ, ವಿಜಯಪುರ:
ಅನುಮಾನಾಸ್ಪದ ರೀತಿಯಲ್ಲಿ ವ್ಯಕ್ತಿಯೊಬ್ಬನ ಶವವೊಂದು ಭೀಮಾನದಿಯಲ್ಲಿ ಪತ್ತೆಯಾಗಿದೆ.
ಮೃತಪಟ್ಟವನನ್ನು ಮಿಟ್ಟು ಧೋತ್ರೆ (42) ಎಂದು ಗುರುತಿಸಲಾಗಿದೆ.
ಜಿಲ್ಲೆಯ ಇಂಡಿ ತಾಲೂಕಿನ ಭಾಗದ ಭೀಮಾನದಿಯಲ್ಲಿ ಮಿಟ್ಟು ಧೋತ್ರೆ ಶವ ಪತ್ತೆಯಾಗಿದ್ದು, ಅಲ್ಲದೇ, ಭೀಮಾನದಿಯ ಬ್ಯಾರೇಜ್ ಮೇಲೆ ಅಪಘಾತ ರೀತಿಯಲ್ಲಿ ಬೈಕ್ ಸಿಕ್ಕಿದೆ. ಆದರೆ ಶವ ಮಾತ್ರ ನದಿಯಲ್ಲಿ ಸಿಕ್ಕಿದೆ.
ಇದು ಕೊಲೆಯೋ ಅಥವಾ ಅಪಘಾತವೋ ? ಎಂಬುದು ಪೊಲೀಸರ ತನಿಖೆ ಬಳಿಕ ತಿಳಿದು ಬರಬೇಕಿದೆ.
ಘಟನಾ ಸ್ಥಳಕ್ಕೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದರು. ಇಂಡಿ ಗ್ರಾಮೀಣ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.