ಹೊಸದಿಗಂತ ವರದಿ, ಮೈಸೂರು:
ರಾಜ್ಯದಲ್ಲಿನ ವಕ್ಛ್ ಆಸ್ತಿಯನ್ನು ಕಬಳಿಸಿರುವುದೇ ಕಾಂಗ್ರೆಸ್ ನಾಯಕರು. ಇದಕ್ಕೆ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ್ ಖರ್ಗೆ, ದಿ.ಧರ್ಮಸಿಂಗ್ ಸೇರಿದಂತೆ ಕಾಂಗ್ರೆಸ್ ನಾಯಕರೇ ಸಹಕಾರ ಕೊಟ್ಟಿದ್ದಾರೆ. ವಕ್ಛ್ ಆಸ್ತಿ ನುಂಗಿರುವವರುವವರ ಆಸ್ತಿಗಳನ್ನು ಹರಾಜು ಹಾಕಿದಲ್ಲಿ 5 ಲಕ್ಷ ಕೋಟಿ ರೂ. ಹಣ ಬರುತ್ತದೆ. ಇದರಿಂದ ಗ್ಯಾರೆಂಟಿ ಯೋಜನೆಗಳನ್ನು ಗಂಡು ಮಕ್ಕಳಿಗೂ ಕೊಡಬಹುದು ಎಂದು ಬಿಜೆಪಿಯ ವಿಧಾನಪರಿಷತ್‌ನ ಮಾಜಿ ಸದಸ್ಯ ಗೋ.ಮಧುಸೂಧನ್ ಹೇಳಿದರು.
ಸೋಮವಾರ ಮೈಸೂರಿನ ಚಾಮರಾಜಪುರಂನಲ್ಲಿರುವ ಬಿಜೆಪಿ ಕಚೇರಿಯಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ರಾಜ್ಯದ ವಿವಿಧೆಡೆ ನಡೆದಿರುವ ವಕ್ಫ್ ಆಸ್ತಿ ಕಬಳಿಯಲ್ಲಿ ಘಟಾನುಘಟಿ ಮುಸ್ಲಿಂ ನಾಯಕರು ಭಾಗಿಯಾಗಿದ್ದಾರೆ. ರೆಹಮಾನ್ ಖಾನ್, ಎನ್ ಎ ಹ್ಯಾರಿಸ್, ದಿವಂಗತ ಜಾಫರ್ ಷರೀಫ್, ರೋಷನ್ ಬೇಗ್, ಅಜೀಜ್ ಸೇಠ್, ಸಿ ಎಂ ಇಬ್ರಾಹಿಂ ಅವರಂತಹ ಪ್ರಭಾವಿಗಳು ಭಾಗಿಯಾಗಿದ್ದಾರೆ. ಇವರೆಲ್ಲರಿಗೂ ಮಲ್ಲಿಕಾರ್ಜುನ ಖರ್ಗೆ, ಧರ್ಮಸಿಂಗ್ ಸಾಥ್ ನೀಡಿದ್ದಾರೆ. ಗುಲ್ಬರ್ಗಾದ ಏಷ್ಯಾ ಮಾಲ್ ಜಾಗ ಖರ್ಗೆ ಕುಟುಂಬಕ್ಕೆ ಸೇರಿದೆ ಎಂದು
ಮೈಸೂರಿನಲ್ಲೂ ವಕ್ಫ್ ಆಸ್ತಿ ಕಬಳಿಕೆ ಯಾಗಿದೆ. ಇದರಲ್ಲಿ ಶಾಸಕ ತನ್ವೀರ್ ಸೇಠ್, ಅವರ ತಂದೆ ಅಜೀಜ್ ಸೇಠ್, ತಾಜ್ ಮೊಹಮದ್ ಖಾನ್ ಅವರ ಹೆಸರು ಸೇರಿದಂತೆ ಹಲವರು ಪಾಲುದಾರರಿದ್ದಾರೆ. 2011 ರ ಸಮಯದಲ್ಲಿ ಸುಮಾರು 2.39 ಲಕ್ಷ ಕೋಟಿ ಮೌಲ್ಯದ 40 ಸಾವಿರ ಎಕರೆ ವಕ್ಪ್ ಆಸ್ತಿ ಕಬಳಿಸಿದ್ದಾರೆ.
ಇದೆಲ್ಲವನ್ನೂ ಮುಸ್ಲಿಂ ನಾಯಕರೇ ಕಬಳಿಸಿದ್ದಾರೆಯೇ ಹೊರತು ಬೇರೆ ಯಾರೂ ಅಲ್ಲ. ಅದಕ್ಕೆ ನಮ್ಮ ಕೆಲವು ನಾಯಕರೂ ಕೈ ಜೋಡಿಸಿದ್ದಾರೆ ಅಷ್ಟೇ. ನಮ್ಮ ಸಿದ್ದರಾಮಯ್ಯ ಅವರು ಅವರನ್ನು ಕಾಪಾಡುವ ಕೆಲಸ ಮಾಡುತ್ತಿದ್ದಾರೆ. ಅದೆಲ್ಲವನ್ನೂ ಹರಾಜು ಹಾಕ್ಬಿಡಿ ಹೇಗೂ ಗ್ಯಾರಂಟಿ ಯೋಜನೆಗಳ ಅನುಷ್ಠಾನಕ್ಕೆ ಹಣ ಇಲ್ಲ ಅಂತೀರಾ. ಇದೆಲ್ಲವನ್ನ ಹರಾಜು ಹಾಕಿದ್ರೆ 5 ಲಕ್ಷ ಕೋಟಿ ಸಿಗುತ್ತದೆ. ಎಲ್ಲರಿಗೂ ಫ್ರೀ ಫ್ರೀ ಅಂತ ಘೋಷಣೆ ಮಾಡಿ ಎಂದು ಸಿಎಂ ಸಿದ್ದರಾಮಯ್ಯರ ಕಾಲೆಳೆದರು.
2013-14ನೇ ಸಾಲಿನಲ್ಲಿ ಸುಮಾರು 2,39 ಲಕ್ಷ ಕೋಟಿ ರೂ. ಮೌಲ್ಯದ 40 ಸಾವಿರ ಎಕರೆ ಆಸ್ತಿ ಕಬಳಿಕೆ ಆಗಿದೆ ಎಂದು ಅಂದು ಮುಖ್ಯಮಂತ್ರಿ ಆಗಿದ್ದ ಸಿದ್ದರಾಮಯ್ಯ ಅವರಿಗೆ ವರದಿ ನಿಡಲಾಗಿದೆ. ವಕ್ಫ್ ಮಂಡಳಿಯ ಅಧ್ಯಕ್ಷರು ಈ ಬಗ್ಗೆ ಸರ್ಕಾರಕ್ಕೆ ವರದಿ ನೀಡಿದ್ದರು. ನಂತರ ಈ ಸಂಬAದ ಲೋಕಾಯುಕ್ತ ಕೂಡ ತನಿಖೆ ನಡೆಸಿದೆ. ಅಂದು ಉಪ ಲೋಕಾಯುಕ್ತರಾಗಿದ್ದ ಆನಂದ್ ಅವರು ನೀಡಿರುವ 9 ವಾಲ್ಯೂಮ್ ವರದಿ ಇಂದಿಗೂ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಕೈಯಲ್ಲಿದೆ. ಅವರು ಈಗಲೂ ಅದರ ಬಗ್ಗೆ ತನಿಖೆ ನಡೆಸಬಹುದು. ತನಿಖೆ ಮಾಡಿಸಿದಲ್ಲಿ ಎಲ್ಲರ ಮುಖವಾಡ ಹೊರಗೆ ಬರತ್ತದೆ ಎಂದರು.
ಅಂದು ನಾನು ಹಕ್ಕು ಬಾದ್ಯತಾ ಸಮಿತಿಯಲ್ಲಿ ಅಧ್ಯಕ್ಷನಾಗಿದ್ದೆ. 2013ರ ಸಮಿತಿಯಲ್ಲಿ ವೀರಣ್ಣ ಮತ್ತಿಕ್ಕಟ್ಟಿ ಅಧ್ಯಕ್ಷರಾಗಿದ್ದರು. ಅವರ ಬಳಿಕ ನಾನು ಅಧ್ಯಕ್ಷನಾದೆ. ಐದು ಜನರ ಸಮಿತಿ ಇತ್ತು. ವೀರಣ್ಣ ಮತ್ತಿಕಟ್ಟಿ ಶುರುವಾಡಿದ ತನಿಖೆಯನ್ನ ನಾವು ಮುಂದುವರೆಸಿದೆವು. ಅಂತಿಮ ವರದಿಯನ್ನೂ ಸಲ್ಲಿಸಿದ್ದು ಕೂಡ ನಾನು ಅಧ್ಯಕ್ಷನಾಗಿದ್ದ ಸಂದರ್ಭದಲ್ಲೇ ಎಂದರು.
ವಕ್ಛ್ ಆಸ್ತಿಯನ್ನು ಬಹುತೇಕ ಕಾಂಗ್ರೆಸ್ ನಾಯಕರೇ ಆಕ್ರಮಿಸಿಕೊಂಡಿದ್ದಾರೆ. ಕೆಲ ಆಸ್ತಿಗಳನ್ನು ವಶಪಡಿಸಿಕೊಂಡವರಿಗೆ ಸಹಕಾರ ನೀಡಿದ್ದಾರೆ. ಇದರಲ್ಲಿ ಗುಲ್ಬರ್ಗ ಜಿಲ್ಲೆಯಲ್ಲಿ ಕ್ವಾಜಾ ಬಂದೆ ನವಾಜ್ ದರ್ಗಾಕ್ಕೆ ಸಂಬoಧಪಟ್ಟ ಜಾಗವನ್ನ ದುರುಪಯೋಗವಾಗಿತ್ತು ಎಂದರು.
ಇದರಲ್ಲಿ ಮಲ್ಲಿಕಾರ್ಜುನ ಖರ್ಗೆ, ಧರ್ಮಸಿಂಗ್ ಪಾಲುದಾರರಾಗಿದ್ದರು. ಈಗ ಅಲ್ಲಿ ದೊಡ್ಡ ವಾಣಿಜ್ಯ ಕಟ್ಟಡಗಳು, ಏಷಿಯನ್ ಮಾಲ್ ಹಾಗೂ ಅಪಾರ್ಟ್ಮೆಂಟ್‌ಗಳನ್ನು ಕಟ್ಟಿದ್ದಾರಲ್ಲ ಅದೆಲ್ಲಾ ಯಾರ ಆಸ್ತಿ ? ಇದೆಲ್ಲ ಮಲ್ಲಿಕಾರ್ಜುನ ಅವರ ಪುತ್ರನಿಗೆ ಸೇರಿದ ಆಸ್ತಿಯಲ್ಲವೆ? ಎಂದು ಪ್ರಶ್ನಿಸಿದ ಅವರು, ಈ ಸಂಬoದ ಬೇರೆಯವರ ಬಗ್ಗೆ ಮಾತನಾಡಲಿಕ್ಕೆ ಜೂನಿಯರ್ ಖರ್ಗೆ ಅವರಿಗೆ ಯಾವ ನೈತಿಕತೆ ಇದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಗುಲ್ಬರ್ಗ ಜಿಲ್ಲೆಯಲ್ಲಿ ಕಮರುಲ್ಲಾ ಇಸ್ಲಾಂ, ಮಾಜಿ ಸಂಸದ ಇಕ್ಬಾಲ್ ಅಹಮದ್ ಸರದಗಿ, ಸಿ.ಎಂ.ಇಬ್ರಾಹಿo, ಮಾಜಿ ಸಂಸದ ರೆಹಮಾನ್ ಖಾನ್, ಬೆಂಗಳೂರು ಗ್ರಾಮಾಂತರ ಜಿಲ್ಲೆಯಲ್ಲಿ ಮಾಜಿ ಸಂಸದ ಆರ್.ರೆಮಾನ್ ಖಾನ್, ಶಾಂತಿನಗರ ಶಾಸಕ ಹ್ಯಾರೀಸ್ ಅವರ ಪತ್ನಿ ತಾಹೇರಾ, ದಿ.ಜಾಫರ್ ಷರೀಫ್, ರೋಷನ್ ಬೇಗ್ ಮುಂತಾದವರು ಭೂ ಕಬಳಿಕೆದಾರರೊಂದಿಗೆ ಶಾಮೀಲಾಗಿರುವ ಬಗ್ಗೆ ದಾಖಲೆಗಳನ್ನು ನೀಡಲಾಗಿದೆ ಎಂದರು.
ಅಜೀಜ್ ಸೇಠ್ ಕೂಡ ಕಬಳಿಸಿದ್ದಾರೆ
ಮೈಸೂರಿನಲ್ಲಿ ಕೂಡ ವಕ್ಛ್ ಆಸ್ತಿ ಕಬಳಿಕೆ ಆಗಿದೆ. ಮ ಆಜಿ ಸಚಿವ ದಿ.ಅಜೀಜ್ ಸೇಠ್ ಅವರು ಹಾಗೂ ಅವರ ಪುತ್ರ ಹಾಲಿ ಶಾಸಕ ತನ್ವೀರ್ ಸೇಠ್ ಸಹ ಕಬಳಿಕೆ ಮಾಡಿದ್ದಾರೆ.
ಮೈಸೂರು ನಗರದ ಸ್‌ಂಯಾಜಿರಾವ್ ರಸ್ತೆಯಲ್ಲಿ ಗೌಸಿಯಾ ಮಂಜಿಲ್, ಅಫ್‌ನಾಘರ್, ರಿಫಾ ವಾಣಿಜ್ಯ ಸಂಕೀರ್ಣಗಳು ಹಾಗೂ ಅಕ್ಬರ್ ರಸ್ತೆಯಲ್ಲಿರುವ ಮಜೀದ್ ಎ ಬಗ್ಟಾನ್ ಎದುರಿರುವ ಖಾಲಿ ಜಾಗಗಳನ್ನು ಮಾಜಿ ಸಚಿವ ದಿ.ಅಜೀಜ್ ಸೇಠ್ ಅವರು ಹಾಗೂ ಅವರ ಪುತ್ರ ಹಾಲಿ ಶಾಸಕ ತನ್ವೀರ್ ಸೇಠ್ ಸಹ ಕಬಳಿಕೆ ಮಾಡಿದ್ದಾರೆ ಎಂದು ಆರೋಪಿಸಿದರು.