ಹೊಸದಿಗಂತ ವರದಿ ಜೋಯಿಡಾ:
ಜೋಯಿಡಾ ತಾಲೂಕಿನ ಕಾಳಿ ಹುಲಿ ಸಂರಕ್ಷಿತ ಪ್ರದೇಶದ ಗುಂದ ಅರಣ್ಯ ಇಲಾಕೆ ವ್ಯಾಪ್ತಿಯ ಶಿವಪುರದ ಮನೆಯೊಂದರಲ್ಲಿ 7 ಚಿರತೆ ಉಗುರು, ಕಡವೆ ಮಾಂಸ, ಉಡದ ಚರ್ಮ 2 ,ಕಿಂಗ್ ಪಿಶರ್ ಹಕ್ಕಿಯ ಕೊಕ್ಕು, 500 ಗ್ರಾಂ ಗಂಧದ ಉತ್ಪನ್ನ, ಪಕ್ಷಿ ಬಲೆ, ಮದ್ದು ಹಾಗೂ ಹುಸಿ ಬಾಂಬ್ ಮತ್ತು ನಾಡಬಂದೂಕನ್ನು ಗುಂದ ವಲಯ ಅರಣ್ಯಾಧಿಕಾರಿ ರವಿಕಿರಣ್ ಸಂಪಗಾವಿ ನೇತೃತ್ವದಲ್ಲಿ ಪತ್ತೆ ಹಚ್ಚಿ ಅಪರಾಧಿಗಳನ್ನು ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದೆ.
ನಾರಾಯಣ ತಿಮ್ಮಣ್ಣಮಹಾಲೆ ರಘುನಾಥ್ ತಿಮ್ಮಣ್ಣಮಹಾಲೆ ಸುಧಾಕರ್ ವಡ್ಡೋ ಮಹಾಲೆ ಮಾರುತಿ ಕೃಷ್ಣಮೂರ್ತಿ. ಲಕ್ಕೊಳ್ಳಿ ಶಶಾಂಕ್ ನಾರಾಯಣ್ ಮಹಾಲೆ ಎಂಬುವವರ ಮೇಲೆ ಪ್ರಕರಣ ದಾಖಲಿಸಲಾಗಿದೆ.
ಈ ಕಾರ್ಯಾಚರಣೆಯಲ್ಲಿ ಕಾಳಿ ಹುಲಿ ಸಂರಕ್ಷಿತ ಪ್ರದೇಶದ ನಿರ್ದೇಶಕ ನಿಲೇಶ್ ಸಿಂಧೆ, ಎ.ಸಿ.ಎಪ್ ಅಮರಾಕ್ಷರ ಅವರ ಮಾರ್ಗದರ್ಶನದಲ್ಲಿ ಗುಂದ ವಲಯ ಅರಣ್ಯಾಧಿಕಾರಿ ರವಿಕಿರಣ್ ಸಂಪಗಾವಿ ಮತ್ತು ಗುಂದ ವಲಯದ ಅರಣ್ಯ ಇಲಾಖೆ ಸಿಬ್ಬಂದಿಗಳು ಪಾಲ್ಗೊಂಡಿದ್ದರು.