ಹೊಸದಿಗಂತ ಡಿಜಿಟಲ್ ಡೆಸ್ಕ್:
ದೇಶದಲ್ಲಿ ಬಾಂಬ್ ಬೆದರಿಕೆ ಸಂದೇಶಗಳ ಹಾವಳಿ ಹೆಚ್ಚಾಗುತ್ತಲೇ ಇದ್ದು, ಇದೀಗ ಪಶ್ಚಿಮ ಬಂಗಾಳದ ರಾಜಭವನವನ್ನು ಸ್ಫೋಟಿಸುವುದಾಗಿ ಕಿಡಿಗೇಡಿಗಳು ಕರೆ ಮಾಡಿದ್ದಾರೆ
ನಾವು ಟೆರರೂಸರ್ಸ್ ಎಂಬ ಭಯೋತ್ಪಾದಕ ಗುಂಪಿನವರು. ನಿಮ್ಮ ಕಟ್ಟಡದ ಒಳಗೆ ಸ್ಫೋಟಕ ಸಾಧನಗಳನ್ನು ಇರಿಸಿದ್ದೇವೆ. ಅನೇಕ ಮಂದಿ ಮಂದಿ ಸಾಯುತ್ತಾರೆ, ರಕ್ತದ ಮಡುವಿನಲ್ಲಿ ಬೀಳುತ್ತೀರಿ ಎಂದು ಭೀಕರವಾಗಿ ಬೆದರಿಸಿದ್ದಾರೆ.
ಅಂಡಮಾನ್ ಮತ್ತು ನಿಕೋಬಾರ್ ದ್ವೀಪಗಳಲ್ಲಿನ ಸೆಲ್ಯುಲಾರ್ ಜೈಲು ಮತ್ತು ಬಿಹಾರ ರಾಜಭವನಕ್ಕೂ ಇದೇ ರೀತಿಯ ಸಂದೇಶಗಳು ಬಂದಿವೆ ಎಂದು ವರದಿಯಾಗಿದೆ. ಆದರೆ, ಕೋಲ್ಕತ್ತಾ ಪೊಲೀಸರು ಈ ಸಂದೇಶವನ್ನು ಹುಸಿ ಎಂದು ಕರೆದಿದ್ದಾರೆ. ಸಂದೇಶ ಕಳುಹಿಸಿದವರ ಬಗ್ಗೆ ಪತ್ತೆಹಚ್ಚಲು ಹೆಚ್ಚಿನ ತನಿಖೆ ನಡೆಯುತ್ತಿದೆ.