ತಮಿಳುನಾಡಿನಲ್ಲಿ ಆಳವಾದ ಕಂದಕಕ್ಕೆ ಉರುಳಿದ ಬಸ್‌, ನಾಲ್ವರು ಸಾವು , 45 ಮಂದಿ ಸ್ಥಿತಿ ಗಂಭೀರ

ಹೊಸದಿಗಂತ ಡಿಜಿಟಲ್‌ ಡೆಸ್ಕ್‌: 

ತಮಿಳುನಾಡಿನ ಸೇಲಂನಲ್ಲಿ ಖಾಸಗಿ ಬಸ್ ನಿಯಂತ್ರಣ ಕಳೆದುಕೊಂಡು ಕಂದಕಕ್ಕೆ ಉರುಳಿದೆ.

ಎರ್ಕಾಡ್‌ನಿಂದ ಸೇಲಂಗೆ ತೆರಳುತ್ತಿದ್ದ ಖಾಸಗಿ ಬಸ್‌ ನಿಯಂತ್ರಣ ತಪ್ಪಿ ಗುಡ್ಡದ ಕೆಳಗೆ ಪಲ್ಟಿಯಾಗಿ ಬಿದ್ದಿದೆ, ಇದರಿಂದಾಗಿ ನಾಲ್ವರು ಸ್ಥಳದಲ್ಲೇ ಮೃತಪಟ್ಟಿದ್ದಾರೆ.45 ಮಂದಿಗೆ ಗಂಭೀರವಾದ ಗಾಯಗಳಾಗಿದ್ದು, ಆಸ್ಪತ್ರೆಗೆ ದಾಖಲಿಸಲಾಗಿದೆ.

13 ನೇ ಹೇರ್‌ಪಿನ್ ಬೆಂಡ್ ಬಳಿ ಚಾಲಕನು ವಾಹನದ ನಿಯಂತ್ರಣವನ್ನು ಕಳೆದುಕೊಂಡಿದ್ದರು ಎಂದು ಆರಂಭಿಕ ವರದಿಗಳು ಸೂಚಿಸುತ್ತವೆ, ಬೆಟ್ಟದ ಇಳಿಜಾರಿನಲ್ಲಿ ತುಂಬಾ ಕಾಳಜಿಯಿಂದ ಚಲಿಸಬೇಕಾಗುತ್ತದೆ. ಚಾಲಕನ ನಿಯಂತ್ರಣ ತಪ್ಪಿ ಬಸ್‌ ಕಂದಕಕ್ಕೆ ಬಿದ್ದು ಅನಾಹುತು ಸಂಭವಿಸಿದೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!