Thursday, March 23, 2023

Latest Posts

SHOCKING | ಪಾರಿವಾಳದ ಕಾಲಿನಲ್ಲಿ ಮೈಕ್ರೋ ಕ್ಯಾಮೆರಾ, ರೆಕ್ಕೆಯ ಮೇಲೆ ಬೇರೆ ಭಾಷೆಯಲ್ಲಿ ಸಂದೇಶ! 

ಹೊಸದಿಗಂತ ಡಿಜಿಟಲ್ ಡೆಸ್ಕ್:

ಒಡಿಶಾದ ಜಗತ್‌ಸಿಂಗ್‌ಪುರ ಜಿಲ್ಲೆಯ ಪರದೀಪ್ ಕರಾವಳಿಯಲ್ಲಿ ಮೈಕ್ರೋ ಕ್ಯಾಮೆರಾ ಅಳವಡಿಸಿದ ಪಾರಿವಾಳ ಸಿಕ್ಕಿದೆ. ಬೇಹುಗಾರಿಕೆಗೆ ಪಾರಿವಾಳವನ್ನು ಬಳಸಿರುವ ಶಂಕೆ ಎದುರಾಗಿದೆ. ಪರದೀಪ್ ಕರಾವಳಿಯಲ್ಲಿ ಮೀನುಗಾರರು ಕೆಲ ದಿನಗಳ ಹಿಂದೆ ಸಮುದ್ರದಲ್ಲಿ ಮೀನುಗಾರಿಕೆ ನಡೆಸುವ ವೇಳೆ, ದೋಣಿಯ ಮೇಲೆ ಪಾರಿವಾಳ ಕೂತಿರುವುದನ್ನು ಗಮನಿಸಿದ್ದಾರೆ.

ಕಾಲಿನಲ್ಲಿ ಯಾವುದೋ ವಸ್ತು ಇರುವುದನ್ನು ಗಮನಿಸಿದ್ದಾರೆ. ಇದು ಕ್ಯಾಮೆರಾ ಎಂದು ಗೊತ್ತಾಗುತ್ತಿದ್ದಂತೆಯೇ ಎಚ್ಚೆತ್ತ ಮೀನುಗಾರರು ಪಾರಿವಾಳವನ್ನು ಸೆರೆಹಿಡಿದು ಮೆರೈನ್ ಪೊಲೀಸರ ಬಳಿ ತೆರಳಿದ್ದಾರೆ.

ಪೊಲೀಸರು ಪಾರಿವಾಳವನ್ನು ಪಶುವೈದ್ಯರಿಗೆ ನೀಡಿದ್ದು, ತಪಾಸಣೆ ನಡೆಸುತ್ತಿದ್ದಾರೆ. ಕಾಲುಗಳಿಗೆ ಜೋಡಿಸಿರುವ ಸಾಧನವನ್ನು ಪರೀಕ್ಷಿಸಲಾಗುತ್ತಿದೆ. ಪಾರಿವಾಳದ ರೆಕ್ಕೆಯ ಮೇಲೂ ಯಾವುದೋ ಸಂದೇಶ ಬರೆಯಲಾಗಿದೆ. ಆದರೆ ಅದು ಯಾವ ಭಾಷೆ? ಏನು ಬರೆಯಲಾಗಿದೆ ತಿಳಿದುಬಂದಿಲ್ಲ.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Latest Posts

Don't Miss

error: Content is protected !!