Friday, January 2, 2026

MIGRANE | ಮೈಗ್ರೇನ್‌ ಅಂದ್ರೆ ಸಿಂಪಲ್‌ ತಲೆನೋವಲ್ಲ, ಈ ಎಲ್ಲ ವಿಷಯಗಳಿಂದಲೂ ತಲೆ ಸಿಡಿಯುತ್ತಂತೆ!

ಮಾಮೂಲಿ ತಲೆನೋವು ಬಂದಾಗ ಒಂದು ಬಿಸಿಬಿಸಿ ಲೋಟ ಕಾಫಿ ಕುಡಿದೋ ಅಥವಾ ಎಂದಿಗಿಂತ ಸ್ವಲ್ಪ ಬೇಗ ಮಲಗಿಕೊಂಡ್ರೆ ಬೆಳಗ್ಗೆಗೆ ಫ್ರೆಶ್‌ ಆಗುತ್ತಾರೆ. ಆದರೆ ಮೈಗ್ರೇನ್‌ ಹಾಗಲ್ಲ. ಮೈಗ್ರೇನ್‌ನ ನೋವು ಅತಿಯಾದ್ದು! ಸಣ್ಣ ಪುಟ್ಟ ವಿಷಯಗಳಿಂದಲೂ ಮೈಗ್ರೇನ್‌ ಟ್ರಿಗರ್‌ ಆಗುತ್ತದೆ. ಯಾವ ವಿಷಯ ನೋಡಿ..

ಬಿಸಿಲಿಗೆ ಹೋಗಿ ಬಂದ್ರೆ
ಸ್ಟ್ರಾಂಗ್‌ ಆದ ಪರ್ಫ್ಯೂಮ್‌ ವಾಸನೆಗೆ
ತಲೆ ಸ್ನಾನ ಮಾಡಿ ಕೂದಲು ಒಣಗದೇ ಇದ್ದರೆ
ಹೆಚ್ಚು ಸೌಂಡ್‌ ಇರುವ ಜಾಗದಲ್ಲಿ ಇದ್ದರೆ
ಹೊಟ್ಟೆ ಹೆಚ್ಚು ಹಸಿದಿದ್ರೆ

ಹಾರ್ಮೋನ್‌ಗಳ ಬದಲಾವಣೆ, ಸ್ಟ್ರೆಸ್‌ ಹಾಗೂ ಆಂಕ್ಸೈಟಿ
ಇದ್ದಕ್ಕಿದ್ದಂತೆಯೇ ವೆದರ್‌ನಲ್ಲಿ ಬದಲಾವಣೆ
ಕಣ್ಣು ಚುಚ್ಚುವಂತ ಬೆಳಕಿನಲ್ಲಿ ಇರುವುದು
ನಿದ್ದೆ ಇಲ್ಲದೇ ಇರುವುದು ಅಥವಾ ಮಾಮೂಲಿಗಿಂತ ಒಂದು ಗಂಟೆ ನಿದ್ದೆ ಕಡಿಮೆಯಾದ್ರೂ ಮೈಗ್ರೇನ್‌
ಹೆಚ್ಚು ನೀರು ಕುಡಿಯದೇ ಇದ್ದರೆ

error: Content is protected !!