ಜಗತ್ತಿನ ಅತೀ ಎತ್ತರದ ಪ್ರದೇಶಕ್ಕೆ ಬೈಕ್‌ನಲ್ಲಿ ತೆರಳಿದ ತಾಯಿ-ಮಗಳ ಡ್ಯುಯೋ!

ಹೊಸದಿಗಂತ ಡಿಜಿಟಲ್ ಡೆಸ್ಕ್:

ಬೈಕ್‌ನಲ್ಲಿ ಮಕ್ಕಳನ್ನು ಕಾಲೇಜಿಗೆ ಕಳಿಸುವುದಕ್ಕೂ ಭಯಪಡುವ ತಾಯಿಯರಿದ್ದಾರೆ, ಹಾಗೇ ಬೈಕ್ ತೆಗೆದುಕೊಂಡು ಜಗತ್ತಿನ ಅತೀ ಎತ್ತರದ ಪ್ರದೇಶಕ್ಕೆ ರೈಡ್ ಹೋಗೋಣ ಎಂದು ಹೇಳುವ ತಾಯರಿಯರೂ ಇದ್ದಾರೆ!

ಹೌದು, ನೀವು ನಂಬದೇ ಇರಬಹುದು, ಆದರೆ ಇದು ನಿಜ ಸಮುದ್ರಮಟ್ಟಕ್ಕಿಂತ ಸುಮಾರು 19,024 ಅಡಿ ಎತ್ತರದಲ್ಲಿ ಇರುವ ಜಗತ್ತಿನ ಅತೀ ಎತ್ತರದ ಪ್ರದೇಶ ಉಮ್ಲಿಂಗಾ ಪಾಸ್‌ಗೆ ಕುಂದಾಪುರ ಮೂಲದ ತಾಯಿ ಮಗಳ ಜೋಡಿ ಬೈಕ್ ಮೂಲಕ ತೆರಳಿದೆ.

ವಿಲ್ಮಾ ಕ್ರಾಸ್ತಾ ಕರ್ವಾಲೋ ಬೈಕ್‌ನಲ್ಲಿ ಮಗಳ ಜೊತೆ ಸಾಹಸಿ ಬೈಕ್ ರೈಡ್ ಮುಗಿಸಿದ್ದಾರೆ. 55 ರ ಹರೆಯದಲ್ಲಿಯೂ ವಿಲ್ಮಾಗೆ ರೈಡಿಂಗ್ ಅಂದರೆ ಎನರ್ಜಿ, ಈಗಾಗಲೇ ವಿಲ್ಮಾ ಜಗತ್ತಿನ ಎರಡನೇ ಎತ್ತರದ ಪ್ರದೇಶ ಖದುಂರ್ಗ್ಲಾ ಪಾಸ್‌ಗೆ ಹೋಗಿ ಬಂದಿದ್ದಾರೆ.

ಈ ಬಾರಿ ಸೋಲೋ ರೈಡ್ ಮಾಡದೇ ಮಗಳಿ ಚೆರಿಶ್ ಜೊತೆ ಡ್ರೈವ್ ಮಾಡಿದ್ದಾರೆ. ಸಾಹಸಿಗಳು ಮಾತ್ರ ತಲುಪಬಹುದಾದ ಜಾಗಕ್ಕೆ ಅಮ್ಮ ಮಗಳು ತಲುಪಿದ್ದಾರೆ. ವಿಲ್ಮಾ ಈಗಾಗಲೇ ಲಡಾಕ್‌ಗೆ ಮೂರು ಬಾರಿ ಬೈಕ್‌ನಲ್ಲಿಯೇ ತೆರಳಿದ್ದಾರೆ.

ಎಲ್ಲರಿಗೂ ಈ ಧೈರ್ಯ ಅಥವಾ ಇಷ್ಟ ಇರುವುದಿಲ್ಲ, ಇಷ್ಟಪಟ್ಟಿದ್ದನ್ನು ಮಾಡಬೇಕು, ಅದಕ್ಕೆ ಬೇಕಾದ ಫಿಟ್ ದೇಹ ಇರಬೇಕು ಎಂದು ವಿಲ್ಮಾ ಹೇಳಿದ್ದಾರೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!