ಬದುಕು, ನಷ್ಟ, ಸಂಬಂಧಗಳ ಪಾಠ ಕಳಿಸಿದ ಸಿನಿಮಾ: ಸೂರ್ಯ ಜೊತೆಗಿನ ಪೋಸ್ಟ್ ಹಂಚಿಕೊಂಡ ರಮ್ಯಾ!

ಹೊಸದಿಗಂತ ಡಿಜಿಟಲ್‌ ಡೆಸ್ಕ್:

ಸಿನಿಮಾರಂಗದಲ್ಲಿ ದೂರ ಉಳಿದಿದ್ದ ಸ್ಯಾಂಡಲ್‌ವುಡ್ ನಟಿ ರಮ್ಯಾ ಮತ್ತೆ ಸಕ್ರೀಯರಾಗಿದ್ದು, ಮತ್ತೆ ದೊಡ್ಡ ಪರದೆ ಮೇಲೆ ನೋಡಲು ಅಭಿಮಾನಿಗಳು ಕಾದಿದ್ದಾರೆ.

ಇದರ ನಡುವೆ ರಮ್ಯಾ ನಟಿಸಿರುವ ‘ಹಾಸ್ಟೆಲ್​ ಹುಡುಗರು ಬೇಕಾಗಿದ್ದಾರೆ’ ಸಿನಿಮಾ ಜುಲೈ 21ರಂದು ಬಿಡುಗಡೆ ಆಗಲಿದೆ. ಈ ಮೂಲಕ ಅಭಿಮಾನಿಗಳಿಗೆ ಖುಷಿ ಸಂದೇಶ ನೀಡಿದ್ದಾರೆ.

ಇತ್ತ ಅದೇ ದಿನ, ರಮ್ಯಾ ಮತ್ತು ತಮಿಳು ನಟ ಸೂರ್ಯ ನಟನೆಯ ಹಳೇ ಸಿನಿಮಾ ‘ಸೂರ್ಯ ಸನ್​ ಆಫ್​ ಕೃಷ್ಣನ್​’ಕೂಡ ಮರು ಬಿಡುಗಡೆ ಆಗಲಿದೆ. ಈ ಪ್ರಯುಕ್ತ ರಮ್ಯಾ ಅವರು ಹಳೇ ನೆನಪುಗಳನ್ನು ಮೆಲುಕು ಹಾಕಿದ್ದಾರೆ.

ತಮಿಳಿನ ‘ವಾರನಂ ಆಯಿರಂ’ ಸಿನಿಮಾ ತೆಲುಗಿಗೆ ‘ಸೂರ್ಯ ಸನ್​ ಆಫ್​ ಕೃಷ್ಣನ್​’ ಎಂದು ಡಬ್​ ಆಗಿ 2008ರಲ್ಲಿ ತೆರೆಕಂಡಿತ್ತು. ಸುಮಾರು 15 ವರ್ಷಗಳ ಬಳಿಕ ಆ ಸಿನಿಮಾ ಮತ್ತೆ ರೀರಿಲೀಸ್ ಆಗುತ್ತಿದೆ. ಆ ಸಿನಿಮಾದ ಪೋಸ್ಟರ್​ ಅನ್ನು ರಮ್ಯಾ ಹಂಚಿಕೊಂಡಿದ್ದಾರೆ. ಅದರ ಜೊತೆ ರಮ್ಯಾ ಬರೆದುಕೊಂಡಿರುವ ಕ್ಯಾಪ್ಷನ್​ ಗಮನ ಸೆಳೆಯುತ್ತಿದೆ.

ಈ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ರಮ್ಯಾ, ‘ಈ ಸಿನಿಮಾದಲ್ಲಿ ಕೆಲಸ ಮಾಡಿದ್ದು ತುಂಬ ಖುಷಿ ನೀಡಿತ್ತು. ಇದರ ಚಿತ್ರೀಕರಣ ನಡೆದಾಗ ನನಗೆ 22 ವರ್ಷ ವಯಸ್ಸು. ನಾನು ಒಂದಷ್ಟು ಎಮೋಷನ್​ಗಳಿಗೆ ತೆರೆದುಕೊಳ್ಳಬೇಕಿತ್ತು. ಆ ಪ್ರಾಯದಲ್ಲಿ ನನಗೆ ಅಂಥ ಅನುಭವಗಳೇ ಆಗಿರಲಿಲ್ಲ. ಬದುಕು, ನಷ್ಟ, ಸಂಬಂಧಗಳ ಬಗ್ಗೆ ನಾನು ಸಾಕಷ್ಟು ವಿಚಾರಗಳನ್ನು ತಿಳಿದುಕೊಂಡೆ. ಪ್ರಿಯಾ ಎಂಬ ಪಾತ್ರ ಯಾವಾಗಲೂ ತಾಳ್ಮೆ ಮತ್ತು ಪ್ರೀತಿಯ ಸಂಕೇತವಾಗಿ ಇರುತ್ತದೆ. ನಾನೂ ಆ ರೀತಿ ಪ್ರೀತಿಸುವಂತಿದ್ದರೆ ಚೆನ್ನಾಗಿರುತ್ತಿತ್ತು. ರಾಷ್ಟ್ರ ಪ್ರಶಸ್ತಿ ಪಡೆದ ಕಲ್ಟ್​ ಕ್ಲಾಸಿಕ್ ಜುಲೈ 21 ಮತ್ತೆ ಬರ್ತಿದೆ. ಆನಂದಿಸಿ’ ಎಂದು ಬರೆದುಕೊಂಡಿದ್ದಾರೆ. ರಮ್ಯಾ ಪೋಸ್ಟ್‌ಗೆ ಅನೇಕರು ಕಾಮೆಂಟ್ ಮಾಡಿ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಇಂಥ ಸಿನಿಮಾ ನೀಡಿದ್ದಕ್ಕೆ ಧನ್ಯವಾದ ತಿಳಿಸುತ್ತಿದ್ದಾರೆ.

 

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!