ಹೊಸದಿಗಂತ ಡಿಜಿಟಲ್ ಡೆಸ್ಕ್:
ನಟ ಕಿಚ್ಚ ಸುದೀಪ್ ವಿರುದ್ಧ ನಿರ್ಮಾಪಕ ಎಂ.ಎನ್.ಕುಮಾರ್ ಮಾಡಿರುವ ವಂಚನೆ ಆರೋಪ ಸದ್ಯ ಕೋರ್ಟ್ ಅಂಗಾಲದಲ್ಲಿದ್ದು, ಈ ನಡುವೆ ನಾಳೆ ನಿರ್ಮಾಪಕ ಎಂ.ಎನ್. ಕುಮಾರ್ ಧರಣೆ ನಡೆಸಲು ಮುಂದಾಗಿದ್ದಾರೆ.
ನಾಳೆ ಬೆಳಗ್ಗೆ 11ಕ್ಕೆ ಅವರು ಕರ್ನಾಟಕ ಫಿಲಂ ಚೇಂಬರ್ ಮುಂದೆ ಧರಣಿ ಕೂರಲಿದ್ದಾರೆ. ಕುಮಾರ್ಗೆ ಇನ್ನೂ ಕೆಲವು ನಿರ್ಮಾಪಕರು ಜೊತೆಯಾಗಲಿದ್ದಾರೆ ಎನ್ನಲಾಗಿದೆ.
ಸುದೀಪ್ ಹಣ ತೆಗೆದುಕೊಂಡೂ ಸಿನಿಮಾ ಮಾಡಲು ಮುಂದೆ ಬರುತ್ತಿಲ್ಲ ಎಂದು ನಿರ್ಮಾಪಕ ಎಂ.ಎನ್.ಕುಮಾರ್ ಆರೋಪ ಮಾಡುವ ಮೂಲಕ ವಿವಾದ ಭುಗಿಲೆದ್ದಿತ್ತು. ಬಳಿಕ ಈ ಸಂಬಂಧ ಕುಮಾರ್ಗೆ ಸುದೀಪ್ ಲೀಗಲ್ ನೋಟಿಸ್ ಜಾರಿ ಮಾಡಿದ್ದರು. ನಂತರ ಪ್ರಕರಣ ನ್ಯಾಯಾಲಯದ ಮೆಟ್ಟಿಲೇರಿದ್ದು, ಸುದೀಪ್ ಈ ಪ್ರಕರಣವನ್ನು ನ್ಯಾಯಾಲಯದಲ್ಲೇ ಬಗೆಹರಿಸಿಕೊಳ್ಳಲು ಬಿಡಿ ಎಂದು ಫಿಲಂ ಚೇಂಬರ್ ಮತ್ತು ನಿರ್ಮಾಪಕರ ಸಂಘದವರಿಗೆ ತಿಳಿಸಿದ್ದರು.