Thursday, June 30, 2022

Latest Posts

ರಾಷ್ಟ್ರೀಯ ಹೆದ್ದಾರಿಯಲ್ಲಿ ನಾಜೂಕಾಗಿ ನಡೆದ ರಾಷ್ಟ್ರೀಯ ಪ್ರಾಣಿ: ವಿಡಿಯೋ ವೈರಲ್

ಹೊಸದಿಗಂತ ಡಿಜಿಟಲ್ ಡೆಸ್ಕ್:

ರಾಷ್ಟ್ರೀಯ ಹೆದ್ದಾರಿಯಲ್ಲಿ ರಾಷ್ಟ್ರೀಯ ಪ್ರಾಣಿ ರಾಜಗಾಂಭೀರ್ಯದಿಂದ ಓಡಾಡಿರುವ ವಿಡಿಯೋವೊಂದು ಭಾರೀ ವೈರಲ್ ಆಗುತ್ತಿದೆ.
ಭಾರತೀಯ ಅರಣ್ಯ ಸೇನಾ ಅಧಿಕಾರಿ ಸುಶಾಂತ ನಂದಾ ಅವರು ಈ ವಿಡಿಯೋ ಶೇರ್ ಮಾಡಿದ್ದಾರೆ. ಭಾರತದಲ್ಲಿ ಮತ್ತೊಂದು ದಿನ, ರಾಷ್ಟ್ರೀಯ ಹೆದ್ದಾರಿಯಲ್ಲಿ ರಾಷ್ಟ್ರೀಯ ಪ್ರಾಣಿ ಎಂದು ಬರೆದುಕೊಂಡಿದ್ದಾರೆ.

15 ಸೆಕೆಂಡುಗಳ ಈ ವಿಡಿಯೋದಲ್ಲಿ ಹುಲಿ ರಾಷ್ಟ್ರೀಯ ಹೆದ್ದಾರಿಯೊಂದರಲ್ಲಿ ಯಾವುದೇ ಅಳುಕಿಲ್ಲದೆ, ನಾಜೂಕಾಗಿ ನಡೆದು ಕಾಡಿನ ಒಳಗೆ ಹೋಗಿದೆ. ತಮಿಳುನಾಡಿನ ಛಾಯಾಗ್ರಾಹಕ ರಾಜ್ ಮೋಹನ್ ಇದನ್ನು ಕ್ಯಾಮೆರಾದಲ್ಲಿ ಸೆರೆಹಿಡಿದಿದ್ದಾರೆ.
ರಾಜ್ ಮೋಹನ್ ಕೂಡ ವಿಡಿಯೋವನ್ನು ಶೇರ್ ಮಾಡಿದ್ದು, ವಾಲ್ಪರೈನ ಪ್ರದೇಶದಲ್ಲಿ ಈ ಹುಲಿ ಕಾಣಿಸಿದೆ. ನಾನು ಗಾಢ ನಿದ್ದೆಯಲ್ಲಿದ್ದೆ. ನನ್ನ ಹೆಂಡತಿ ಹುಲಿ ನೋಡಿ ಜೋರಾಗಿ ಕೂಗಿಕೊಂಡಳು ಎಂದು ಹೇಳಿದ್ದಾರೆ.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss