ದಿನಭವಿಷ್ಯ: ಈ ರಾಶಿಯ ಉದ್ಯಮ ಮತ್ತು ವ್ಯವಹಾರದಲ್ಲಿ ಹೊಸ ಅಧ್ಯಾಯ ತೆರೆಯಲಿದೆ

ಮೇಷ
ಕೆಲವು ವ್ಯಕ್ತಿಗಳು ನಿಮ್ಮ ನೆರವಿಗೆ ಬರತಕ್ಕವರು. ಅವರ ಜತೆ ನಿರಂತರ ಸಂಪರ್ಕವಿರಿಸಿಕೊಳ್ಳಿ. ಆರ್ಥಿಕ  ಒತ್ತಡ ಅಧಿಕ.  ವಸ್ತು ಖರೀದಿಯ ಉತ್ಸಾಹ ನಿಯಂತ್ರಿಸಿ.

ವೃಷಭ
ನಿಮ್ಮ ಕಾರ್ಯದಲ್ಲಿ ಒದಗಿಬರುತ್ತಿರುವ ಅಡ್ಡಿಗಳಿಂದ ಮಾನಸಿಕ ಖಿನ್ನತೆ. ಮನೆಯಲ್ಲಿನ  ಅಭಿಪ್ರಾಯಭೇದವೂ ಮನಸ್ಸು ಕೆಡಿಸುವುದು. ಸಹನೆ ಅತಿ ಮುಖ್ಯ.

ಮಿಥುನ
ಕೆಲ ಸಮಯದಿಂದ ಬಾಕಿ ಉಳಿದಿದ್ದ   ಕಾರ್ಯವೊಂದು ಇಂದು ಮುಕ್ತಾಯ ಕಾಣುವುದು. ಹರಿತ ವಸ್ತುಗಳ ಜತೆ ಜಾಗ್ರತೆಯಿಂದಿರಿ.

ಕಟಕ
ಆರೋಗ್ಯದ ಆತಂಕ ನಿವಾರಣೆ ಕಾಣುವುದು. ಮನಸ್ಸಿಗೆ ನಿರಾಳತೆ.  ಆರ್ಥಿಕ ವ್ಯವಸ್ಥೆ ತುಸು ಚಿಂತೆಗೆ ಕಾರಣವಾಗುವುದು. ಖರ್ಚು ಕಡಿಮೆ ಮಾಡಿ.

ಸಿಂಹ
ಆಹಾರ ಸೇವನೆಯಲ್ಲಿ ಎಚ್ಚರ ವಹಿಸಿ. ಆರೋಗ್ಯ ಕೆಡಿಸುವ ಆಹಾರ ತ್ಯಜಿಸಿ. ಕೌಟುಂಬಿಕ ಪರಿಸರದಲ್ಲಿ ಅಸಮಾಧಾನ, ಅಶಾಂತಿ. ತಾಳ್ಮೆಗೆಡಬೇಡಿ.

ಕನ್ಯಾ
ನಿಮಗೆ ಪೂರಕವಾದ ದಿನ. ಕಾರ್ಯದಲ್ಲಿ ಯಶಸ್ಸು. ಬಂಧುಗಳಿಂದ ಮನಸ್ಸಿಗೆ ನೆಮ್ಮದಿ ತರುವ ವಿಚಾರ ಕೇಳುವಿರಿ. ಆರೋಗ್ಯ ಸಮಸ್ಯೆ ಪರಿಹಾರ ಕಾಣುವುದು.

ತುಲಾ
ಯಶಸ್ವೀ ದಿನ. ಕೌಟುಂಬಿಕ ಪರಿಸ್ಥಿತಿ ಸೌಹಾರ್ದಕರ. ಆರೋಗ್ಯವೂ ಸದೃಢ. ವಿರೋಧಿಗಳ ಜತೆ ಸಂಬಂಧ ಸುಧಾರಿಸುವುದು.

ವೃಶ್ಚಿಕ
ಉದ್ಯೋಗದಲ್ಲಿ ಹೆಚ್ಚು ಹೊಣೆಗಾರಿಕೆ, ಒತ್ತಡ ಅನುಭವಿಸುವಿರಿ. ಆರ್ಥಿಕ ಹೂಡಿಕೆಯಿಂದ ಲಾಭ. ಒಗ್ಗದ  ಆಹಾರ ಸೇವನೆಯಿಂದ ಹೊಟ್ಟೆ ಕೆಡಬಹುದು.

ಧನು
ಕೌಟುಂಬಿಕ ಕ್ಷೆಭೆ ಇಂದು ತಣ್ಣಗಾಗುವುದು.  ಮನಸ್ತಾಪವನ್ನು ಮಾತುಕತೆಯಿಂದ ಪರಿಹರಿಸಿರಿ.  ಸಣ್ಣ ವಿಷಯವನ್ನು ಅತಿಯಾಗಿ ತೆಗೆದುಕೊಳ್ಳದಿರಿ.

ಮಕರ
ದಿನವಿಡೀ ಬಿಡುವಿಲ್ಲದ ಕಾರ್ಯ. ಆದರೂ ಕೆಲವು ಕಾರ್ಯ ಅಪೂರ್ಣವಾಗಿಯೇ ಉಳಿಯಬಹುದು. ಇತರರನ್ನು ಅವಲಂಬಿ ಸುವುದು ಬೇಡ.

ಕುಂಭ
ಭವಿಷ್ಯದ ಕುರಿತು ಕೆಲವು ಆತಂಕಗಳು ಕಾಡುವವು. ಕಾರ್ಯವೊಂದು ಸಫಲವಾಗದ ಚಿಂತೆ. ವಿದ್ಯಾರ್ಥಿಗಳ ವಿದ್ಯಾಭ್ಯಾಸಕ್ಕೆ ಹೆಚ್ಚು ಗಮನ ಅವಶ್ಯ.

ಮೀನ
ಕೌಟುಂಬಿಕ ನೆಮ್ಮದಿಗೆ ಕೆಲವಾರು ಅಡ್ಡಿಗಳು.  ಕುಟುಂಬ ಸದಸ್ಯರ ಜತೆ ಉತ್ತಮ ಹೊಂದಾಣಿಕೆ ಸಾಧಿಸಿಕೊಳ್ಳಿ. ಸಣ್ಣ ವಿಷಯಕ್ಕೂ ಸಂಘರ್ಷ ತಪ್ಪಿಸಿರಿ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!