ದಿಗಂತ ವರದಿ ವಿಜಯನಗರ:
ಸಮೀಪದ ತುಂಗಭದ್ರಾ ಜಲಾಶಯದಲ್ಲಿ ಕಳಚಿ ಬಿದ್ದಿರುವ ಜಾಗದಲ್ಲಿ ವಾಟರ್ ಸ್ಟಾಪೇಜ್ ಎಲಿಮೆಂಟ್ ಅಷ್ಟೇ. ಮುಂದಿನ ಮಳೆಗಾಲದ ವೇಳೆಗೆ ಗೇಟ್ ಕ್ರಸ್ಟ್ ಗೇಟ್ ಅಳವಡಿಸಿಕೊಳ್ಳುವಂತೆ ಆದಷ್ಟು ಬೇಗ ವರದಿ ಸಲ್ಲಿಸುವುದಾಗಿ ಜಲಾಶಯಗಳ ಸುರಕ್ಷತಾ ತಜ್ಞ ಕನ್ನಯ್ಯ ನಾಯ್ಡು ಹೇಳಿದರು
ಹೊಸಪೇಟೆಯ ಟಿಬಿ ಬೋರ್ಡ್ ನ ಪ್ರವಾಸಿ ಮಂದಿರದಲ್ಲಿ ಸುದ್ದಿ ಗೋಷ್ಠಿಯಲ್ಲಿ ಮಾತನಾಡಿ, ಕ್ರಸ್ಟ್ ಗೇಟ್ ನಂ. ೧೯ ಕಳಚಿ ಬಿದ್ದ ಜಾಗದಲ್ಲಿ ಸ್ಟಾಪ್ ಲಾಗ್್ ನ ಮೊದಲ ಎಲಿಮೆಂಟ್ ಕೂರಿಸುವಲ್ಲಿ ಯಶಸ್ವಿಯಾಗಿರುವುದು ಸಂತಸ ತಂದಿದೆ. ಸ್ಟಾಪ್ ಲಾಗ್ ಎಲಿಮೆಂಟ್ ನಿಂದ ಸುಮಾರು ೧೦೦ ಟಿಎಂಸಿ ನೀರು ಸಂಗ್ರಹಿಸಬಹುದು. ಸ್ಟಪ್ ಲಾಗ್ ನ ಐದು ಎಲಿಮೆಂಟ್ ಗಳಿದ್ದು, ತಲಾ ಒಂದು ಎಲಿಮೆಂಟ್ ನಿಂದ ೨೫ ಟಿಎಂಸಿ ನೀರು ಉಳಿತಾಯವಾಗಲಿದೆ.
ಜಲಾಶಯದಲ್ಲಿ ಎಷ್ಟೇ ನೀರು ಸಂಗ್ರಹವಾಗಿ, ಎಷ್ಟೇ ರಭಸದಿಂದ ನೀರು ಧುಮ್ಮುಕ್ಕಿದರೂ ಸ್ಟಾಪ್ ಲಾಗ್ ತಡೆದುಕೊಳ್ಳಲಿದೆ. ಆದರೆ, ಅದಕ್ಕೆ ಯಾವುದೇ ಧಕ್ಕೆಯಿಲ್ಲ. ಆದರೆ, ನೀರಿನ ಹೊರ ಹರಿವನ್ನು ಕಂಟ್ರೋಲ್ ಮಾಡಲಾಗದು. ಈ ಹಿನ್ನೆಲೆಯಲ್ಲಿ ಮುಂದಿನ ಮಳೆ ವರ್ಷದ ಒಳಗಾಗಿ ಕ್ರಸ್ಟ್ ಗೇಟ್ ನಿರ್ಮಿಸಲು ಸಲಹೆ ನೀಡಿ ಕೇಂದ್ರ ಸರ್ಕಾರದ ಸಿಡಬ್ಲ್ಯೂ ಸಿ, ಕರ್ನಾಟಕ, ಆಂಧ್ರ ಪ್ರದೇಶ ಹಾಗೂ ತೆಲಂಗಾಣ ಮುಖ್ಯಮಂತ್ರಿಗೆ ವರದಿ ನೀಡುವುದಾಗಿ ತಿಳಿಸಿದರು.