ಹೊಸದಿಗಂತ ಡಿಜಿಟಲ್ ಡೆಸ್ಕ್:
ಕೋವಿಡ್ ವೈರಸ್ ಅನಾಹುತಗಳಿಂದ ಈಗಷ್ಟೇ ಚೇತರಿಸಿಕೊಳ್ಳುತ್ತಿರುವ ಅಮೆರಿಕೆಗೆ ಈಗ ಇನ್ನೊಂದು ವೈರಸ್ ಸವಾಲಾಗಿ ಕಾಡಿದೆ!
ಅಮೆರಿಕೆಯ ಈಶಾನ್ಯ ಭಾಗಗಳಲ್ಲಿ ನೊರೊವೈರಸ್ ವ್ಯಾಪಕವಾಗಿ ಹರಡುತ್ತಿದ್ದು, ಮೂರು ವಾರಗಳ ಪರೀಕ್ಷೆಯ ಸರಾಸರಿ ಪಾಸಿಟಿವ್ ಪ್ರಮಾಣ 13.9%ಕ್ಕೆ ತಲುಪಿದೆ.
ಎಲ್ಲಾ ವಯಸ್ಸಿನ ವ್ಯಕ್ತಿಗಳ ಮೇಲೆ ಪರಿಣಾಮ ಬೀರಬಹುದಾದ ಈ ವೈರಸ್ ಅತ್ಯಂತ ವೇಗವಾಗಿ ಹರಡುವ ಗುಣವನ್ನು ಹೊಂದಿದೆ. ಇದು ಆಡಳಿತಕ್ಕೆ ಹೊಸ ಆತಂಕವನ್ನು ತಂದಿಟ್ಟಿದೆ.
ಏನಿದು ನೊರೊವೈರಸ್
ಇದು ಹೊಟ್ಟೆಯ ಸೋಂಕು ಉಂಟುಮಾಡುವ ವೈರಸ್. ಇದು ಅತಿಸಾರ, ವಾಂತಿ, ತಲೆನೋವು ಮೊದಲಾದ ಕಾಯಿಲೆಗಳಿಗೆ ಕಾರಣವಾಗುತ್ತದೆ. ನಿರ್ಲಕ್ಷ್ಯ ವಹಿಸಿದರೆ ಜೀವಕ್ಕೆ ಅಪಾಯವನ್ನೂ ತರಬಹುದಾದ ಶಕ್ತಿ ಹೊಂದಿದೆ.