ಹೊಸದಿಗಂತ ಡಿಜಿಟಲ್ ಡೆಸ್ಕ್:
ಶಾಲೆಯ ಆವರಣದಲ್ಲಿ ಉಂಟಾದ ವಿದ್ಯಾರ್ಥಿಗಳಿಬ್ಬರ ಜಗಳ ಕೊಲೆಯಲ್ಲಿ ಪರ್ಯಾವಸಾನವಾದ ವಿಕ್ಷಣ ಘಟನೆ ರಾಷ್ಟ್ರ ರಾಜಧಾನಿ ದಿಲ್ಲಿಯಲ್ಲಿ ನಡೆದಿದೆ.
ಆರನೇ ತರಗತಿಯ ವಿದ್ಯಾರ್ಥಿ ಹಾಗೂ 14 ವರ್ಷದ ವಿದ್ಯಾರ್ಥಿಯ ಜೊತೆ ಜಗಳ ಆರಂಭವಾಗಿದ್ದು, ಇದು ತಾರಕಕ್ಕೇರಿದೆ. ಈ ಸಂದರ್ಭ ಆರನೇ ತರಗತಿ ವಿದ್ಯಾರ್ಥಿ ಬಾಲಕನಿಗೆ ಗುದ್ದಿದ್ದು, ಈ ವೇಳೆ ಗಾಯಗೊಂಡ ಬಾಲಕ ತೀವ್ರ ರಕ್ತಸ್ರಾವದಿಂದ ಸಾವನ್ನಪ್ಪಿದ್ದಾನೆ ಎಂದು ತನಿಖೆ ನಡೆಸುತ್ತಿರುವ ಪೊಲೀಸರು ತಿಳಿಸಿದ್ದಾರೆ.
ಪೊಲೀಸರು ಈ ಘಟನೆಗೆ ಸಂಬಂಧಿಸಿ ದಾಖಲಾಗಿರುವ ಸಿಸಿಟಿವಿ ದೃಶ್ಯಾವಳಿಗಳನ್ನು ಬಳಸಿ ಶುಕ್ರವಾರ ಸಂಜೆ ಆರೋಪಿಯನ್ನು ಬಂಧಿಸಿದ್ದಾರೆ.