ಹಳೆ ಬೈಕ್‌ಗೆ ಹೊಸ ಲುಕ್: ಡಿ.ಕೆ. ಶಿವಕುಮಾರ್ ಫುಲ್ ಖುಷ್!

ಹೊಸದಿಗಂತ ಡಿಜಿಟಲ್ ಡೆಸ್ಕ್: 

ಡಿಸಿಎಂ ಡಿ.ಕೆ. ಶಿವಕುಮಾರ್ ತಾವು ಓಡಿಸುತ್ತಿದ್ದ 1981 ರ ಮಾಡೆಲ್ ಹಳೇ ಎಝಡಿರೋಡ್ ಕಿಂಗ್ ಬೈಕ್‌ಗೆ ಹೊಸ ರೂಪ ಕೊಟ್ಟಿದ್ದಾರೆ.

43 ವರ್ಷದ ಹಳೇಯದಾದ 1981ರ ಮಾಡೆಲ್‌ನ ಸಿಎಇ 7684 ನಂಬರಿನ ಎಝಡಿ ರೋಡ್ ಕಿಂಗ್ ಬೈಕ್ ಅವರ ಮನೆಯಲ್ಲಿತ್ತು. ಈ ಬೈಕ್ ಅವರು ವಿದ್ಯಾರ್ಥಿ ಜೀವನ ಹಾಗೂ ವಿದ್ಯಾರ್ಥಿ ಕಾಂಗ್ರೆಸ್‌ನ ರಾಜಕೀಯ ಚಟುವಟಿಕೆಗಳಿಗೆ ಡಿಕೆಶಿ ಬಳಸುತ್ತಿದ್ದರು. ಇಂದಿಗೂ ಈ ಬೈಕ್ ಡಿಕೆಶಿ ಪಾಲಿಗೆ ಲಕ್ಕಿ ಬೈಕ್ ಎನಿಸಿಕೊಂಡಿದೆ.

ಈ ಬೈಕನ್ನು ಕಳೆದ ಮೂವತ್ತು ವರ್ಷಗಳಿಂದ ಹಾಗೆಯೇ ನಿಲ್ಲಿಸಿದ್ದರು. ನಿಲ್ಲಿಸಿದ್ದಲ್ಲಿಯೇ ಎಝಡಿ ರೋಡ್ ಕಿಂಗ್ ತುಕ್ಕು ಹಿಡಿದಿತ್ತು. ತುಕ್ಕು ಹಿಡಿದ ತಮ್ಮ ಲಕ್ಕಿ ಬೈಕ್‌ಗೆ ವಿಂಟೇಜ್ ಬೈಕ್ ಸಿದ್ಧಪಡಿಸುವ ಕ್ರೇಜ್ ಹೊಂದಿರುವ ಸುಪ್ರೀತ್ ಅವರಿಂದ ಈಗ ಹೊಸ ರೂಪ ಕೊಡಲಾಗಿದೆ.

ದೇಶದ ವಿವಿಧ ಭಾಗ ಹಾಗೂ ವಿದೇಶದಿಂದ ಬೈಕಿನ ಕೆಲ ಬಿಡಿ ಭಾಗಗಳನ್ನು ಆಮದು ಮಾಡಿಸಿಕೊಂಡು ಸುಮಾರು 2 ಲಕ್ಷ ರೂ. ವೆಚ್ಚದಲ್ಲಿ ಡಿಕೆಶಿ ತಮ್ಮ ಕಾಲೇಜು ದಿನಗಳಲ್ಲಿ ಓಡಾಡುತ್ತಿದ್ದ ಬೈಕ್ ರಿಪೇರಿ ಮಾಡಿಸಿದ್ದಾರೆ.

43 ವರ್ಷದ ಹಳೆಯ ತಮ್ಮ ವಿದ್ಯಾರ್ಥಿ ಜೀವನದ ಫೇವರೇಟ್ ಬೈಕ್ ಮನೆ ಒಳಗೆ ಮರ ಹಾಗೂ ಗ್ಲಾಸ್‌ನ ಫ್ರೇಮ್ ಮಾಡಿಸಿ ಶೋ ಪೀಸ್ ಮಾಡಿ ಇಟ್ಟುಕೊಳ್ಳಲು ಡಿಕೆಶಿ ತೀರ್ಮಾನಿಸಿದ್ದಾರೆ. ಇದು ನನ್ನ ರಾಜಕೀಯ ಜೀವನಕ್ಕೆ ಹೊಸ ತಿರುವು ನೀಡಿದ ಲಕ್ಕಿ ಬೈಕ್ ಎಂದು ಡಿಕೆಶಿ ತಮ್ಮ ಅಪ್ತರ ಬಳಿ ಹೇಳಿಕೊಂಡಿದ್ದಾರೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!