ಬಿಜೆಪಿ ಅವಧಿಯಲ್ಲಿ ಕೋವಿಡ್ ಹಗರಣ ನಡೆದಿದ್ದರೆ ವಿಪಕ್ಷದಲ್ಲಿವರು ಯಾಕೆ ಸುಮ್ಮನಿದ್ದರು?: ಬಿ.ಸಿ.ಪಾಟೀಲ್ ಚಾಟಿ

 ಹೊಸದಿಗಂತ ವರದಿ,ದಾವಣಗೆರೆ:

ಬಿಜೆಪಿ ಸರ್ಕಾರದಲ್ಲಿ ಕೋವಿಡ್ ಹಗರಣ ನಡೆದಿದ್ದರೆ ವಿಪಕ್ಷದಲ್ಲಿವರು ಯಾಕೆ ಸುಮ್ಮನಿದ್ದರು? ಹಗರಣದಲ್ಲಿ ಅವರಿಗೂ ಪಾಲು ಇತ್ತಾ? ಎಂದು ಮಾಜಿ ಸಚಿವ ಬಿ.ಸಿ.ಪಾಟೀಲ್ ಆಕ್ರೋಶ ವ್ಯಕ್ತಪಡಿಸಿದರು.

ನಗರದಲ್ಲಿ ಭಾನುವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸರ್ಕಾರ ಬದಲಾವಣೆಯಾಗಿ ೧೪ ತಿಂಗಳಾಗುತ್ತಾ ಬಂದಿದ್ದು, ಈವರೆಗೂ ಸುಮ್ಮನಿದ್ದವರು ಈಗ ತನಿಖೆ ಮಾಡುತ್ತೇವೆಂದರೆ ಏನರ್ಥ? ಮತ್ತೆ ಆಗ ಯಾಕೆ ಸುಮ್ಮನಿದ್ದರು? ಅದೇನೋ ಬಿಚ್ಚಿಡ್ತೀನಿ, ಬಿಚ್ಚಿಡ್ತೀನಿ ಅಂತಾ ಹೇಳುತ್ತಾರಲ್ಲ, ಬಿಚ್ಚಿಡಲಿ ನೋಡೋಣ ಎಂದು ಕಿಡಿಕಾರಿದರು.

ವಿನಾಕಾರಣ ಬಿಜೆಪಿಯವರು ಆಪರೇಷನ್ ಕಮಲ ಮಾಡುತ್ತಾರೆಂದು ಕಾಂಗ್ರೆಸ್ಸಿನವರು ಆರೋಪಿಸುತ್ತಿದ್ದಾರೆ. 136 ಕಾಂಗ್ರೆಸ್ ಶಾಸಕರಿರುವಾಗ ಇದು ಹೇಗೆ ಸಾಧ್ಯ? 100 ಕೋಟಿಗೆ ಖರೀದಿ ಮಾಡುತ್ತಾರೆಂದು ಕಾಂಗ್ರೆಸ್ ಶಾಸಕರು ತಮ್ಮ ತಲೆಗೆ ತಾವೇ ಹಣ ಕಟ್ಟಿಕೊಳ್ಳುತ್ತಿದ್ದಾರೆ. ಸರ್ಕಾರ ಅಸ್ಥಿರಗೊಳಿಸಬೇಕೆಂದರೆ 90 ಶಾಸಕರು ಬೇಕು. ಇದೆಲ್ಲಾ ಸಾಧ್ಯವೇ? ಎಂದು ಅವರು ಪ್ರಶ್ನಿಸಿದರು.

ಕಾಂಗ್ರೆಸ್ಸಿನವರಿಗೆ ಹೇಳಿಕೊಳ್ಳುವುದಕ್ಕೆ ಯಾವುದೇ ಅಭಿವೃದ್ಧಿ ಕೆಲಸ ಇಲ್ಲ. ಗ್ಯಾರಂಟಿ ಯೋಜನೆಗಳನ್ನೂ ಸಮರ್ಪಕವಾಗಿ ಜಾರಿಗೊಳಿಸಿಲ್ಲ. ಜನರ ಗಮನ ಬೇರೆಡೆ ಸೆಳೆಯಲು ಹೀಗೆಲ್ಲಾ ಮಾಡುತ್ತಿದ್ದಾರೆ ಎಂದು ಅವರು ಅಸಮಾಧಾನ ಹೊರ ಹಾಕಿದರು.

- Advertisement - Skool Shine Skool Shine

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!