ಹೊಸದಿಗಂತ ಡಿಜಿಟಲ್ ಡೆಸ್ಕ್:
ಮುಡಾ ಹಗರಣ ಪ್ರಕರಣಕ್ಕೆಅಕ್ಟೋಬರ್ 28ರಂದು ನಾವು ಹೊಸ ರೂಪ ಕೊಡುತ್ತಿದ್ದೇವೆ ಎಂದು ಟಿ.ಜೆ ಅಬ್ರಾಹಂ ಹೊಸ ಬಾಂಬ್ ಸಿಡಿಸಿದ್ದಾರೆ.
ಈ ಬಗ್ಗೆ ಇಂದು ಬೆಂಗಳೂರಿನಲ್ಲಿ ಮಾಧ್ಯಮಗಳ ಜೊತೆ ಮಾತನಾಡಿರುವ ಸಾಮಾಜಿಕ ಕಾರ್ಯಕರ್ತ ಟಿ.ಜೆ ಅಬ್ರಾಹಂ ,ನಾನು ಸಿಎಂ ಪತ್ನಿ ವಾಪಸ್ ಕೊಟ್ಟಿದ್ದಕ್ಕೆ ಧನ್ಯವಾದ ಹೇಳಿಲ್ಲ. ಮುಡಾ ವಾಪಸ್ ಪಡೆದಿರೋದಕ್ಕೆ ಧನ್ಯವಾದ ಹೇಳಿದ್ದೇನೆ. ಸೈಟ್ ವಾಪಸ್ ಕೊಟ್ಟಿದ್ದಕ್ಕೆ ಹೋರಾಟ ನಿಲ್ಲಿಸುವುದಿಲ್ಲ. ದಾಖಲೆಗಳು ಇದೆ. ತಲೆ ಕೆಳಗೆ ನಿಂತರೂ ಕೇಸ್ ಬೀಳುವುದಿಲ್ಲ. ದಾಖಲೆಗಳ ಮೇಲೆ ಕೋರ್ಟ್ ಆದೇಶ ಕೊಟ್ಟಿದೆ. ಅಕ್ಟೋಬರ್ 28ರಂದ ಕೇಸ್ ಗೆ ಹೊಸ ರೂಪ ಕೊಡುತ್ತಿದ್ದೇವೆ ಎಂದು ಹೇಳಿದರು.
ಸ್ನೇಹಮಯಿ ಕೃಷ್ಣ ಹೊರಾಟದ ಬಗ್ಗೆ ನಾನು ಮಾತನಾಡುವುದಿಲ್ಲ. ಹೈಕೊರ್ಟ್ ಆದೇಶ ನನ್ನ ದೂರಿನ ಮೇಲೆ ಕೊಟ್ಟಿದೆ. ಜನಪ್ರತಿನಿಧಿಗಳ ಕೋರ್ಟ್ ನಲ್ಲಿ ಒಂದು ತಿಂಗಳು ಟೈಮ್ ಕೇಳಿದ್ದೆ. ಲೋಕಯುಕ್ತ ಪೊಲೀಸರು ನಮ್ಮವರು. ಸಿಬಿಐನವರು ಯಾರು, ದಾಖಲೆಗಳು ಆರ್ ಟಿಸಿ, ದಾನಪತ್ರ ಕನ್ನಡದಲ್ಲಿವೆ. ಇದನ್ನ ಓದುವವರು ಕರ್ನಾಟಕದ ಅಧಿಕಾರಿಗಳು. ಸಿಬಿಐನವರಿಗೆ ಕೊಂಬಿದ್ಯಾ? ಆಕಾಶದಿಂದ ಬರುತ್ತಾರಾ? ಸಿಬಿಐ ಸೋತಿರುವ ಕೇಸ್ ಗಳನ್ನ ಲೋಕಾಯುಕ್ತಕ್ಕೆ ಕೊಡಲಿ. ಲೋಕಾಯುಕ್ತ ಪೊಲೀಸ್ ಅನ್ನೋದು ಡಿಫರೆಂಟ್ ವಿಂಗ್. ಅವರು ಸಿಎಂ, ಗೃಹ ಸಚಿವರಿಗೆ ರಿಪೊರ್ಟ್ ಮಾಡಬೇಕಂತ ಇಲ್ಲ. ಲೋಕಾಯುಕ್ತದಲ್ಲಿ ಒಳ್ಳೆ ಅಧಿಕಾರಿಗಳಿದ್ದಾರೆ. ನಮ್ಮಲ್ಲಿ ಆಗದಿದ್ದನ್ನ ಹಿಂದಿ ಬರೋರು ಏನ್ ಮಾಡ್ತಾರೆ? ಎಂದು ಪ್ರಶ್ನಿಸಿದರು. ಈ ಮೂಲಕ ಅಬ್ರಾಹಂ ಲೋಕಾಯುಕ್ತ ತನಿಖೆ ಸೂಕ್ತ ಎಂದು ಸ್ಪಷ್ಟಪಡಿಸಿದ್ದು, ಸಿಬಿಐ ತನಿಖೆಗೆ ವಿರೋಧಿಸಿದ್ದಾರೆ.