2.5 ಕೋಟಿ ಲಂಚಕ್ಕೆ ಬೇಡಿಕೆ: NIA ಅಧಿಕಾರಿಯನ್ನು ಬಂಧಿಸಿದ ಸಿಬಿಐ

ಹೊಸದಿಗಂತ ಡಿಜಿಟಲ್ ಡೆಸ್ಕ್:

ಶಸ್ತ್ರಾಸ್ತ್ರಗಳನ್ನು ಅಕ್ರಮವಾಗಿ ದಾಸ್ತಾನು ಮಾಡಿದ ಪ್ರಕರಣದಲ್ಲಿ ಕುಟುಂಬವೊಂದನ್ನು ರಕ್ಷಿಸಲು 2.5 ಕೋಟಿ ರೂ. ಲಂಚಕ್ಕೆ ಬೇಡಿಕೆಯಿಟ್ಟಿದ್ದ ಆರೋಪದ ಮೇಲೆ ಎನ್‌ಐಎ ಅಧಿಕಾರಿಯೊಬ್ಬರನ್ನು ಕೇಂದ್ರೀಯ ತನಿಖಾ ದಳ ಬಂಧಿಸಿದೆ.

ಭಯೋತ್ಪಾದನೆ ಪ್ರಕರಣದಲ್ಲಿ ತಮ್ಮ ಕುಟುಂಬವನ್ನು ಸಿಲುಕಿಸುವುದಾಗಿ ಬೆದರಿಸಿ, 2.5 ಕೋಟಿ ರೂ. ಲಂಚಕ್ಕೆ ಬೇಡಿಕೆಯಿಟ್ಟಿದ್ದಾರೆಂದು ಆರೋಪಿಸಿ ಪಾಟ್ನಾ ಎನ್‌ಐಎ ಘಟಕದ ಉಪ ಎಸ್ಪಿ ಅಜಯ್ ಪ್ರತಾಪ್ ಸಿಂಗ್ ವಿರುದ್ಧ ರಾಮಯ್ಯ ಕನ್‌ಸ್ಟ್ರಕ್ಷನ್ ಮಾಲೀಕ ರಾಕಿ ಯಾದವ್ ಸಿಬಿಐಗೆ ದೂರು ಸಲ್ಲಿಸಿದ್ದರು. ದೂರಿನ ಆಧಾರದ ಮೇಲೆ ಎನ್‌ಐಎ ಅಧಿಕಾರಿಯನ್ನು ಸಿಬಿಐ ಬಂಧಿಸಿದೆ.

ರಾಷ್ಟ್ರೀಯ ತನಿಖಾ ಸಂಸ್ಥೆ (ಎನ್‌ಐಎ) ಕಳೆದ ಸೆಪ್ಟೆಂಬರ್ 19 ರಂದು ರಾಕಿ ಯಾದವ್‌ಗೆ ಸಂಬಂಧಿಸಿದ ಸ್ಥಳದಲ್ಲಿ ಶೋಧ ನಡೆಸಿತ್ತು. ಬಳಿಕ ಪ್ರಕರಣದ ತನಿಖಾಧಿಕಾರಿಯಾಗಿದ್ದ ಪ್ರತಾಪ್‌ ಸಿಂಹ್‌ ಸೆ.26ರಂದು ವಿಚಾರಣೆಗೆ ಹಾಜರಾಗುವಂತೆ ತಿಳಿಸಿದ್ದರು. ಅಕ್ರಮವಾಗಿ ಶಸ್ತ್ರಾಸ್ತ್ರಗಳನ್ನು ದಾಸ್ತಾನು ಮಾಡಿದ ಪ್ರಕರಣದಲ್ಲಿ ತಮ್ಮ ಕುಟುಂಬವನ್ನು ರಕ್ಷಿಸಬೇಕಾದ್ರೆ 2.5 ಕೋಟಿ ಲಂಚ ನೀಡುವಂತೆ ಬೇಡಿಕೆಯಿಟ್ಟಿದ್ದರು. ಕುಟುಂಬದ ಸಲುವಾಗಿ ಒಪ್ಪಿಕೊಂಡಿದ್ದೆ ಎಂಬುದಾಗಿ ದೂರಿನಲ್ಲಿ ತಿಳಿಸಿದ್ದಾರೆ.

ಆರೋಪಿ ಪ್ರತಾಪ್‌ ಸಿಂಗ್‌ ಸೆಪ್ಟೆಂಬರ್ 26 ರಂದು 25 ಲಕ್ಷ ರೂ. ಮುಂಗಡ ಹಣ ಪಾವತಿಸಲು ಯಾದವ್‌ಗೆ ಹೇಳಿದ್ದರು. ಮಧ್ಯವರ್ತಿಯೊಬ್ಬರ ಮೊಬೈಲ್ ಸಂಖ್ಯೆ ಹೊಂದಿರುವ ಕೈಬರಹದ ಟಿಪ್ಪಣಿಯನ್ನು ಅವರಿಗೆ ನೀಡಿದರು. ನಂತರ ಬಿಹಾರದ ಔರಂಗಾಬಾದ್‌ಗೆ ತಲುಪಿ ಮಧ್ಯವರ್ತಿ ಮೂಲಕ ಹಣ ತಲುಪಿಸಿದ್ದರು. ಇದಾದ ಮೇಲೆ ಅಕ್ಟೋಬರ್ 1 ರಂದು ಸಿಂಗ್ ಮತ್ತೆ ಯಾದವ್ ಅವರನ್ನು ಕರೆಸಿ, 70 ಲಕ್ಷ ರೂ.ಗೆ ಬೇಡಿಕೆ ಇಡಲಾಗಿತ್ತು ಎಂದು ಸಿಬಿಐಗೆ ನೀಡಿದ ದೂರಿನಲ್ಲಿ ತಿಳಿಸಿದ್ದಾರೆ.

ದೂರುದಾರ ಯಾದವ್‌ರಿಂದ ಅಕ್ರಮವಾಗಿ 20 ಲಕ್ಷ ರೂ. ವಸೂಲಿ ಮಾಡುತ್ತಿದ್ದಾಗ ಆರೋಪಿ ತನಿಖಾ ಅಧಿಕಾರಿ ಹಾಗೂ ಅವರ ಇಬ್ಬರು ಏಜೆಂಟರು ಸಿಬಿಐ ಬಲೆಗೆ ಸಿಕ್ಕಿಬಿದ್ದಿದ್ದಾರೆ. ಇಬ್ಬರು ಮಧ್ಯವರ್ತಿ ಆರೋಪಿ ಹಿಮಾಂಶು ಮತ್ತು ರಿತಿಕ್ ಕುಮಾರ್ ಸಿಂಗ್ ಬಂಧಿತರು. ಇದಾದ ಬಳಿಕ ಗಯಾ, ಪಾಟ್ನಾ ಮತ್ತು ವಾರಣಾಸಿಯ ಹಲ

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here