ಪಾಸ್‌ ವರ್ಡ್‌ ಹಂಚಿಕೆ ತಡೆಗೆ ನೆಟ್‌ ಫ್ಲಿಕ್ಸ್‌ ನಿಂದ ಹೊಸತಂತ್ರ

ಹೊಸದಿಗಂತ ಡಿಜಿಟಲ್‌ ಡೆಸ್ಕ್:
ಉಚಿತ ಪಾಸ್‌ವರ್ಡ್ ಹಂಚಿಕೆ ವ್ಯವಹಾರವನ್ನು ಕೊನೆಗೊಳಿಸಲು ನೆಟ್‌ಫ್ಲಿಕ್ಸ್ ಹೊಸ ಮಾರ್ಗವನ್ನು ಪರೀಕ್ಷಿಸುತ್ತಿದೆ. ಕಂಪನಿಯು ಇತ್ತೀಚೆಗೆ ಚಿಲಿ, ಕೋಸ್ಟರಿಕಾ ಮತ್ತು ಪೆರುವಿನಲ್ಲಿ ವಾಸಿಸುವ ಬಳಕೆದಾರರಿಗೆ “ಹೆಚ್ಚುವರಿ ಸದಸ್ಯರನ್ನು ಸೇರಿಸಿ” ಆಯ್ಕೆಯನ್ನು ಪ್ರಾರಂಭಿಸಿದೆ. ಈ ಫೀಚರ್‌ ಬಳಸಬೇಕಾದರೆ ನಿಮ್ಮ ಮನೆಯ ಹೊರಗಿನ ಜನರು ಪಾವತಿ ಮಾಡಬೇಕಾಗುತ್ತದೆ. ʼಆಡ್‌ ಹೋಮ್‌ʼ ವೈಶಿಷ್ಟ್ಯವು ಈಗಾಗಲೇ ಪರೀಕ್ಷೆಯ ಹಂತದಲ್ಲಿದ್ದು ಭಾರತದಲ್ಲಿ ಇನ್ನು ಬಿಡುಗಡೆಯಾಗಿಲ್ಲ.

ಅರ್ಜೆಂಟೀನಾ, ಡೊಮಿನಿಕನ್ ರಿಪಬ್ಲಿಕ್, ಎಲ್ ಸಾಲ್ವಡಾರ್, ಗ್ವಾಟೆಮಾಲಾ ಮತ್ತು ಹೊಂಡುರಾಸ್ ಮುಂತಾದ ದೇಶಗಳಲ್ಲಿ ʼಆಡ್‌ ಹೋಮ್‌ʼ ವೈಶಿಷ್ಟ್ಯವು ಪರಿಕ್ಷಾರ್ಥ ಬಿಡುಗಡೆಯಾಗಿದೆ. ಆದರೆ ಭಾರತದಲ್ಲಿ ಬಳಕೆದಾರರಿಗೆ ಶುಲ್ಕ ವಿಧಿಸುವ ಅಥವಾ ಇತರರಿಗೆ ಪಾಸ್‌ವರ್ಡ್ ಹಂಚಿಕೊಳ್ಳುವ ಕುರಿತು ನೆಟ್‌ಫ್ಲಿಕ್ಸ್ ಯಾವುದೇ ವಿವರಗಳನ್ನು ಬಹಿರಂಗಪಡಿಸಿಲ್ಲ. ಆದರೆ, ಇದು ಕಂಪನಿಯಾದ್ಯಂತದ ಯೋಜನೆಯಾಗಿರುವುದರಿಂದ, ಮುಂದಿನ ದಿನಗಳಲ್ಲಿ ಇಂತಹ ಶುಲ್ಕಗಳನ್ನು ದೇಶದಲ್ಲಿ ಪರಿಚಯಿಸಲು ಉದ್ದೇಶಿಸಲಾಗಿದೆ. ಈ ವರ್ಷದ ಅಂತ್ಯದ ವೇಳೆಗೆ ತಮ್ಮ ನೆಟ್‌ಫ್ಲಿಕ್ಸ್ ಖಾತೆಯ ಪಾಸ್‌ವರ್ಡ್‌ಗಳನ್ನು ಹಂಚಿಕೊಳ್ಳಲು ಎಲ್ಲಾ ಬಳಕೆದಾರರಿಗೆ ಶುಲ್ಕ ವಿಧಿಸಲು ಪ್ರಾರಂಭಿಸುವುದಾಗಿ ಕಂಪನಿಯು ಹಿಂದೆ ಸುಳಿವು ನೀಡಿತ್ತು. ಆದ್ದರಿಂದ, ಮುಂಬರುವ ತಿಂಗಳುಗಳಲ್ಲಿ ಕಂಪನಿಯು “ಆಡ್ ಎ ಹೋಮ್” ಅನ್ನು ನಾವು ಭಾರತದಲ್ಲಿ ನಿರೀಕ್ಷಿಸಬಹುದಾಗಿದೆ.

 

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!