ಡಾಲರ್‌ ಎದುರು 80ರ ಗಡಿ ದಾಟಿದೆ ರುಪಾಯಿ

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌
ಭಾರತೀಯ ರುಪಾಯಿ ಮಂಗಳವಾರ ಯುಎಸ್‌ ಡಾಲರ್‌ ಗೆ 80 ರ ದಾಖಲೆಯ ಮಟ್ಟಕ್ಕೆ ಕುಸಿದಿದೆ. ಸೋಮವಾರವೂ ಕೂಡ 80ರ ಮಟ್ಟವನ್ನು ಉಲ್ಲೇಖಸಿದ್ದರೂ ಕೊನೆಯ ವಹಿವಾಟಿನಲ್ಲಿ 79.97ಕ್ಕೆ ಮುಚ್ಚಲ್ಪಟ್ಟಿತ್ತು.ಆದರೆ ಮಂಗಳವಾರದ ಆರಂಭಿಕ ವಹಿವಾಟಿನಲ್ಲಿ  ದಾಖಲೆಯ ಕನಿಷ್ಠ 80.0175 ಅನ್ನು ತಲುಪಿದೆ.

ಡಾಲರ್ ಬಲವರ್ಧನೆ, ಏರುತ್ತಿರುವ ಕಚ್ಚಾ ತೈಲ ಬೆಲೆಗಳು, ಹೆಚ್ಚುತ್ತಿರುವ ವ್ಯಾಪಾರ ಕೊರತೆ ಮತ್ತು ವಿದೇಶಿ ಬಂಡವಾಳ ಹೂಡಿಕೆದಾರರ ನಿರಂತರ ಹೊರಹರಿವುಗಳು ರುಪಾಯಿ ಬೆಲೆಯನ್ನು ಇಕ್ಕಟ್ಟಿಗೆ ಸಿಲುಕಿಸಿದೆ.

ಕಳೆದ ಎಂಟು ವರ್ಷಗಳಲ್ಲಿ ಡಾಲರ್ ಎದುರು ಭಾರತೀಯ ರೂಪಾಯಿ ಮೌಲ್ಯ 16.08 (ಶೇ. 25.39) ಕುಸಿದಿದೆ ಎಂದು ಕೇಂದ್ರ ಸರ್ಕಾರ ಸೋಮವಾರ ಸಂಸತ್ತಿನಲ್ಲಿ ಹೇಳಿದೆ. 2014 ರಲ್ಲಿ ಭಾರತೀಯ ರಿಸರ್ವ್ ಬ್ಯಾಂಕ್ (ಆರ್‌ಬಿಐ) ಪ್ರಕಾರ ವಿನಿಮಯ ದರವು ಡಾಲರ್‌ಗೆ 63.33 ರೂಪಾಯಿ ಇತ್ತು. ಜುಲೈ 11, 2022 ರ ಹೊತ್ತಿಗೆ ಅದು ರೂ 79.41 ಕ್ಕೆ ಕುಸಿದಿದೆ ಎಂದು ಹಣಕಾಸು ಸಚಿವಾಲಯ ಸಂಸತ್ತಿಗೆ ತಿಳಿಸಿದೆ.

ರಷ್ಯಾ-ಉಕ್ರೇನ್ ಸಂಘರ್ಷ, ಗಗನಕ್ಕೇರುತ್ತಿರುವ ಕಚ್ಚಾ ತೈಲ ಬೆಲೆ ಮತ್ತು ಜಾಗತಿಕ ಆರ್ಥಿಕ ಪರಿಸ್ಥಿತಿಗಳ ಬಿಗಿ ರೂಪಾಯಿ ಕುಸಿತಕ್ಕೆ ಪ್ರಮುಖ ಕಾರಣ ಎಂದು ವಿತ್ತ ಸಚಿವರು ತಿಳಿಸಿದ್ದಾರೆ. ವಿದೇಶಿ ಬಂಡವಾಳ ಹೂಡಿಕೆದಾರರು 2022-23ರಲ್ಲಿ ಭಾರತೀಯ ಷೇರು ಮಾರುಕಟ್ಟೆಗಳಿಂದ ಇಲ್ಲಿಯವರೆಗೆ ಸುಮಾರು $14 ಬಿಲಿಯನ್ ಹಿಂಪಡೆದಿದ್ದಾರೆ ಎಂದು ಮೂಲಗಳ ವರದಿಗಳು ಉಲ್ಲೇಖಿಸಿವೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!