September 10, 2026
Thursday, September 10, 2026
spot_img

ಕಾವೇರಿ ಕಿಚ್ಚಿಗೆ ಹೊಸ ತಿರುವು: ಮೇಕೆದಾಟು ವಿರುದ್ಧ ಸಿಎಂ ವಿಜಯ್ ಅಖಾಡಕ್ಕೆ

ಹೊಸದಿಗಂತ ಡಿಜಿಟಲ್ ಡೆಸ್ಕ್:

ಕರ್ನಾಟಕದ ಮೇಕೆದಾಟು ಯೋಜನೆಗೆ ಸಂಬಂಧಿಸಿದಂತೆ ಕಾವೇರಿ ನೀರಿನ ಹಂಚಿಕೆ ವಿವಾದ ಮತ್ತೆ ತೀವ್ರಗೊಂಡಿದೆ. ಯೋಜನೆಗೆ ವಿರೋಧ ವ್ಯಕ್ತಪಡಿಸಿರುವ ತಮಿಳುನಾಡು ಮುಖ್ಯಮಂತ್ರಿ ಸಿ. ಜೋಸೆಫ್ ವಿಜಯ್, ಸೋಮವಾರ ಉನ್ನತ ಮಟ್ಟದ ಸಭೆ ನಡೆಸಿ ಅಧಿಕಾರಿಗಳೊಂದಿಗೆ ಕಾನೂನು ಹಾಗೂ ಆಡಳಿತಾತ್ಮಕ ಆಯ್ಕೆಗಳ ಕುರಿತು ಚರ್ಚೆ ನಡೆಸಿದರು.

ಕಾವೇರಿ ನೀರಿನ ಹಕ್ಕು ಮತ್ತು ರೈತರ ಹಿತಾಸಕ್ತಿ ಕಾಪಾಡಲು ಸರ್ಕಾರ ಯಾವುದೇ ಮಟ್ಟದ ಹೋರಾಟಕ್ಕೂ ಸಿದ್ಧ ಎಂಬ ಸಂದೇಶವನ್ನು ಈ ಸಭೆ ಮೂಲಕ ಟಿವಿಕೆ ಸರ್ಕಾರ ನೀಡಿದೆ.

ಮೇಕೆದಾಟು ಯೋಜನೆಗೆ ವಿರೋಧ ಮುಂದುವರಿಕೆ

ತಮಿಳುನಾಡು ಸರ್ಕಾರ ಮೊದಲಿನಿಂದಲೂ ಈ ಯೋಜನೆಗೆ ವಿರೋಧ ವ್ಯಕ್ತಪಡಿಸುತ್ತಲೇ ಬಂದಿದೆ. ಇದೀಗ ಹೊಸ ಟಿವಿಕೆ ಸರ್ಕಾರವೂ ಅದೇ ನಿಲುವು ಮುಂದುವರಿಸಿದ್ದು, ರಾಜ್ಯದ ನೀರಿನ ಹಕ್ಕುಗಳಿಗೆ ಧಕ್ಕೆಯಾಗಬಹುದು ಎಂಬ ಆತಂಕ ಹೊರಹಾಕಿದೆ.

‘ಭೂಮಿ ಪೂಜೆ’ ಚರ್ಚೆ ಹೆಚ್ಚಿಸಿದ ಆತಂಕ

ಕರ್ನಾಟಕ ಸರ್ಕಾರ ಮೇಕೆದಾಟು ಯೋಜನೆಗೆ ಸಂಬಂಧಿಸಿದ ಪ್ರಾಥಮಿಕ ಕಾರ್ಯಗಳಿಗೆ ಮುಂದಾಗುತ್ತಿರುವ ಬೆನ್ನಲ್ಲೇ ಚೆನ್ನೈನಲ್ಲಿ ಸಭೆ ನಡೆದಿದೆ. ಇದರಿಂದ ಎರಡು ರಾಜ್ಯಗಳ ನಡುವಿನ ಕಾವೇರಿ ವಿವಾದ ಮತ್ತೆ ತೀವ್ರಗೊಳ್ಳುವ ಲಕ್ಷಣಗಳು ಗೋಚರಿಸಿವೆ.

ಇದನ್ನೂ ಓದಿ:

ಕಾನೂನು ಹೋರಾಟಕ್ಕೆ ಸಿದ್ಧತೆ

ಸಭೆಯಲ್ಲಿ ಸುಪ್ರೀಂ ಕೋರ್ಟ್ ತೀರ್ಪು ಹಾಗೂ ಹಿಂದಿನ ಕಾನೂನು ಬೆಳವಣಿಗೆಗಳ ಕುರಿತು ಚರ್ಚೆ ನಡೆಸಲಾಗಿದೆ. ಅಗತ್ಯವಿದ್ದರೆ ಮುಂದಿನ ಕಾನೂನು ಕ್ರಮಗಳನ್ನು ವೇಗಗೊಳಿಸಲು ಮುಖ್ಯಮಂತ್ರಿ ವಿಜಯ್ ಅಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !