ಬೆಂಗಳೂರಿನ ಜೆಪಿ ಪಾರ್ಕ್ ವಾರ್ಡ್‌ನಲ್ಲಿರುವ ಉದ್ಯಾನವನಕ್ಕೆ ಭರತ್ ಭೂಷಣ್ ಹೆಸರು

ಹೊಸದಿಗಂತ ಡಿಜಿಟಲ್‌ ಡೆಸ್ಕ್‌:

ಕಾಶ್ಮೀರದ ಪಹಲ್ಗಾಮ್‌ನಲ್ಲಿ ಭರತ್ ಭೂಷಣ್ ಹತ್ಯೆ ಹಿನ್ನೆಲೆ ವಾರ್ಡ್ ನಂ.17 ಜೆಪಿ ಪಾರ್ಕ್ ವಾರ್ಡ್‌ನಲ್ಲಿರುವ ಉದ್ಯಾನವನಕ್ಕೆ ಭರತ್ ಭೂಷಣ್  ಹೆಸರನ್ನು ನಾಮಕರಣ ಮಾಡಲಾಗಿದೆ. ಉದ್ಯಾನವನಕ್ಕೆ ಭರತ್‌ ಭೂಷಣ್‌ ಪಾರ್ಕ್‌ ಎಂದು ಹೆಸರಿಟ್ಟಿದ್ದು, ಭರತ್‌ ಭೂಷಣ್‌ ಮನೆಯ ಬಳಿ ಇರುವ ಪಾರ್ಕ್‌ ಇದಾಗಿದೆ.

ಭರತ್ ಸ್ಮರಣೆಗಾಗಿ ಪಾರ್ಕ್‌ಗೆ ಭರತ್ ಭೂಷಣ್ ಪಾರ್ಕ್ ಎಂದು ನಾಮಕರಣ ಮಾಡಲಾಗಿದೆ. ರಾಜರಾಜೇಶ್ವರಿ ವಿಧಾನಸಭಾ ಕ್ಷೇತ್ರದಲ್ಲಿ ಬರುವ ವಾರ್ಡ್‌ನ ಪಾರ್ಕ್ ಇದಾಗಿದ್ದು, ಭರತ್ ಭೂಷಣ್ ನಿವಾಸದ ಬಳಿ ಇದೆ. ಅಲ್ಲದೇ ಭರತ್ ಭೂಷಣ್ ಇದೇ ಪಾರ್ಕ್‌ನಲ್ಲಿ ಪ್ರತಿದಿನ ವಾಕಿಂಗ್ ಮಾಡುತ್ತಿದ್ದರು. ಪಾರ್ಕ್ ಒಳಗಿನ ಸಬಾಂಗಣದಲ್ಲಿ ಯಾವುದೇ ಕಾರ್ಯಕ್ರಮ ನಡೆದರೂ ಭರತ್ ಅದರಲ್ಲಿ ಸಕ್ರಿಯರಾಗಿ ಪಾಲ್ಗೊಳ್ಳುತ್ತಿದ್ದರು. ಈಗ ಭರತ್ ಸ್ಮರಣೆಗಾಗಿ ಶಾಸಕ ಮುನಿರತ್ನ ಅವರು ಭರತ್ ಹೆಸರನ್ನೇ ಪಾರ್ಕ್‌ಗೆ ನಾಮಕರಣ ಮಾಡಿದ್ದಾರೆ.

ಬೆಳಗ್ಗೆ 5:30ರ ವೇಳೆಗೆ ಭರತ್ ಭೂಷಣ್ ಮೃತದೇಹ ಸುಂದರ ನಗರಕ್ಕೆ ಆಗಮಿಸಿತು. ಅಂತಿಮ ದರ್ಶನಕ್ಕೆ ಸಾರ್ವಜನಿಕರಿಗೆ, ಗಣ್ಯರಿಗೆ ಪ್ರತ್ಯೇಕ ವ್ಯವಸ್ಥೆ ಮಾಡಲಾಗಿದೆ. ಭರತ್ ಭೂಷಣ್ ನಿವಾಸದ ಸುತ್ತ ಬಿಗಿಪೊಲೀಸ್ ಬಂದೋಬಸ್ತ್ ವ್ಯವಸ್ಥೆ ಮಾಡಲಾಗಿದೆ. ಸಿಎಂ ಜೊತೆ ಹಲವು ಗಣ್ಯರು ಆಗಮನ ಹಿನ್ನೆಲೆ ವಿವಿಐಪಿ ದರ್ಶನದ ವ್ಯವಸ್ಥೆ ಕೂಡ ಮಾಡಲಾಗಿದೆ. 

- Advertisement - Ply
Nova

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!