September 25, 2026
Friday, September 25, 2026
spot_img

ಚಿಂತೆ ಬಿಡಿ, ತಿಂಡಿ ಮಾಡಿ 99 | ಸಂಪೂರ್ಣ ಆರೋಗ್ಯಕರ ತಿಂಡಿ: ವೆಜಿಟೇಬಲ್‌ ದೋಸೆ ಟ್ರೈ ಮಾಡ್ತೀರಾ?

ಸಾಮಾಗ್ರಿಗಳು

ದೋಸೆ ಹಿಟ್ಟು
ಕೋಸು
ಕ್ಯಾರೆಟ್‌
ಬೀನ್ಸ್‌
ಬಟಾಣಿ
ಈರುಳ್ಳಿ
ಹಸಿಮೆಣಸು
ಉಪ್ಪು
ಓಂ ಕಾಳು
ಅವರೆಕಾಳು
ಸ್ವೀಟ್‌ ಕಾರ್ನ್‌

ಮಾಡುವ ವಿಧಾನ

ಮೊದಲು ನಿಮ್ಮ ನೆಚ್ಚಿನ ಎಲ್ಲ ತರಕಾರಿಗಳನ್ನು ಚಾಪರ್‌ಗೆ ಹಾಕಿ, ಆನಂತರ ಸಣ್ಣಗಾದಿ ಕತ್ತರಿಸಿದ ತರಕಾರಿಗಳನ್ನು ಒಂದು ಬೌಲ್‌ಗೆ ಹಾಕಿ
ನಂತರ ಹೆಂಚನ್ನು ಕಾಯಲು ಇಡಿ, ಹೆಂಚು ಕಾದ ನಂತರ ಮೀಡಿಯಂ ದಪ್ಪದ ದೋಸೆಯೊಂದನ್ನು ಹರಡಿ
ಆನಂತರ ಅದರ ಮೇಲೆ ತರಕಾರಿಯ ಮಿಶ್ರಣವನ್ನು ಹರಡಿ
ಬೆಂದ ನಂತರ ತರಕಾರಿ ಬದಿಯನ್ನು ಚೆನ್ನಾಗಿ ರೋಸ್ಟ್‌ ಆಗಲು ಬಿಡಿ
ಹೀಗೆ ಮಾಡಿದರೆ ತರಕಾರಿ ದೋಸೆ ರೆಡಿ
ಮಕ್ಕಳಿಗೆ ಹೋಮ್‌ಮೇಡ್‌ ಕೆಚಪ್‌ ಅಥವಾ ಚಟ್ನಿ ಜೊತೆ ಇದನ್ನು ನೀಡಿ

Must Read