ಹೊಸದಿಗಂತ ವರದಿ,ಹುಲಸೂರು:
ತನ್ನ ತಂದೆ ಸಾವಿನ ಹಿನ್ನೆಲೆಯಲ್ಲಿ ಮಾನಸಿಕ ಖಿನ್ನತೆಗೆ ಒಳಗಾಗಿದ್ದ ವ್ಯಕ್ತಿಯೊಬ್ಬ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡ ಘಟನೆ ತಾಲೂಕಿನ ಖಂಡಾಳ ಗ್ರಾಮದಲ್ಲಿ ಜರುಗಿದೆ.
ವಿಶ್ವನಾಥ್ ಶರಣಪ್ಪ ಮಹಾಲಿಂಗ (40) ಆತ್ಮಹತ್ಯೆ ಮಾಡಿಕೊಂಡ ವ್ಯಕ್ತಿಯಾಗಿದ್ದಾನೆ.
ಕಳೆದ 20 ದಿನಗಳ ಹಿಂದೆ ಈತನ ತಂದೆ ಸಹ ಆತ್ಮಹತ್ಯೆ ನೇಣಿಗೆ ಶರಣಾಗಿದ್ದರು.
ತಂದೆ ಸಾವಿನ ಹಿನ್ನೆಲೆಯಲ್ಲಿ ಮಾನಸಿಕ ಖಿನ್ನತೆಗೆ ಒಳಗಾಗಿದ್ದ ಈತನು ಸಹ ತನ್ನ ಜಮೀನಿನಲ್ಲಿಯ ಶೆಡ್’ನಲ್ಲಿ ತಂದೆ ಆತ್ಮಹತ್ಯೆ ಮಾಡಿಕೊಂಡ ಸ್ಥಳದಲ್ಲಿಯೇ ಈತನು ಸಹ ನೇಣು ಬಿಗಿದುಕೊಂಡು ಆತ್ಮಹತ್ಯೆಗೆ ಶರಣಾಗಿದ್ದಾನೆ.
ಕ್ರೈಂ ಪಿಎಸ್ಐ ಕೃಷ್ಣ ಸುಬೇದಾರ್ ನೇತೃತ್ವದ ಪೊಲೀಸ್’ರ ತಂಡ ಸ್ಥಳಕ್ಕೆ ಭೇಟಿನೀಡಿ ಪರಿಶೀಲಿಸಿದ್ದು, ಈ ಕುರಿತು ಹುಲಸೂರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.