ನಾಯ್ಡು ಪ್ರಮಾಣ ವಚನ: ಚಿರಂಜೀವಿ, ಪವನ್​ ಕಲ್ಯಾಣ್​ ಕೈಹಿಡಿದು ಸಂಭ್ರಮಿಸಿದ ಪ್ರಧಾನಿ ಮೋದಿ!

ಹೊಸದಿಗಂತ ಡಿಜಿಟಲ್‌ ಡೆಸ್ಕ್‌: 

ಆಂಧ್ರ ಪ್ರದೇಶ ಮುಖ್ಯಮಂತ್ರಿಯಾಗಿ ಚಂದ್ರಬಾಬು ನಾಯ್ಡು ಅವರ ಪ್ರಮಾಣ ವಚನ ಸ್ವೀಕಾರ ಮಾಡಿದ್ದಾರೆ.

ಈ ವೇಳೆ ಪ್ರಧಾನಿ ನರೇಂದ್ರ ಮೋದಿ ಅವರು ವೇದಿಕೆಯಲ್ಲಿ ತೆಲುಗು ಚಿತ್ರರಂಗದ ಸೂಪರ್‌ ಸ್ಟಾರ್‌ಗಳಾದ ‘ಮೆಗಾ ಸ್ಟಾರ್​’ ಚಿರಂಜೀವಿ ಹಾಗೂ ‘ಪವರ್​ ಸ್ಟಾರ್’ ಪವನ್ ಕಲ್ಯಾಣ್ಅವರೊಂದಿಗೆ ಆತ್ಮೀಯವಾಗಿ ನಗೆ ಬೀರಿದರು.

ಪ್ರಮಾಣ ವಚನ ಕಾರ್ಯಕ್ರಮಕ್ಕೆ ಆಗಮಿಸಿದ ಪ್ರಧಾನಿ ಮೋದಿಯವರು ವೇದಿಕೆಯ ಮಧ್ಯಕ್ಕೆ ತೆಲುಗು ಸೂಪರ್‌ಸ್ಟಾರ್‌ ಚಿರಂಜೀವಿ ಹಾಗೂ ಅವರ ಸೋದರ ಆಂಧ್ರಪ್ರದೇಶ ಡಿಸಿಎಂ ಪವನ್‌ ಕಲ್ಯಾಣ್ ಅವರನ್ನು ಕರೆತಂದು ಎಲ್ಲರಿರುವಾಗಲೇ ವೇದಿಕೆಯ ಮಧ್ಯೆಯೇ ತಮ್ಮ ಅಕ್ಕ ಪಕ್ಕ ಇಬ್ಬರನ್ನು ನಿಲ್ಲಿಸಿ ಕೈಯನ್ನು ಇಬ್ಬರೂ ಸೇರಿ ಮೇಲೆತ್ತಿ ಸಂಭ್ರಮಾಚರಿಸಿದರು.

ಈ ವೇಳೆ ಚಿರಂಜೀವಿ ಪುತ್ರ ರಾಮ್‌ಚರಣ್ ವೇದಿಕೆ ಕೆಳಭಾಗದಿಂದಲೇ ಇವರ ಸಂಭ್ರಮ ನೋಡಿ ಖುಷಿಪಟ್ಟರು. ಜೊತೆಗೆ ಚಿರಂಜೀವಿ ಪವನ್ ಕಲ್ಯಾಣ್ ಕೆನ್ನೆ ಹಿಂಡಿ ಖುಷಿಪಟ್ಟರು.

ಈ ವೇಳೆ ಇಲ್ಲಿಗೆ ಬಂದ ಆಂಧ್ರ ಪ್ರದೇಶ ಸಿಎಂ ಚಂದ್ರಬಾಬು ನಾಯ್ಡು ಪ್ರಧಾನಿ ಮೋದಿಯವರನ್ನು ಅಲ್ಲಿಂದ ಕರೆದುಕೊಂಡು ಹೋಗಿ ವೇದಿಕೆಯಲ್ಲಿದ್ದ ಇತರ ಸಿನಿಮಾ ರಂಗದ ಗಣ್ಯರಾದ ತಮಿಳು ಸೂಪರ್‌ ಸ್ಟಾರ್ ರಜನಿಕಾಂತ್, ಅವರ ಪತ್ನಿ ಲತಾ ರಜನಿಕಾಂತ್, ಮತ್ತೊಬ್ಬ ತೆಲುಗು ನಟ ನಂದಮೂರಿ ಬಾಲಕೃಷ್ಣ ಮುಂತಾದವರ ಬಳಿ ಮಾತನಾಡಿಸಿದರು.

https://x.com/ANI/status/1800787144643879085?ref_src=twsrc%5Etfw%7Ctwcamp%5Etweetembed%7Ctwterm%5E1800787144643879085%7Ctwgr%5E78505605b81d15fa1035b1616f854ae497d73065%7Ctwcon%5Es1_&ref_url=https%3A%2F%2Fstatic.asianetnews.com%2Ftwitter-iframe%2Fshow.html%3Furl%3Dhttps%3A%2F%2Ftwitter.com%2FANI%2Fstatus%2F1800787144643879085%3Fref_src%3Dtwsrc5Etfw

 

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!