VIDEO | ಮಗು ರೀತಿ ಮಂಗನ ಜೊತೆ ಬಂದು ವೋಟ್‌ ಮಾಡಿದ ವ್ಯಕ್ತಿ

ಹೊಸದಿಗಂತ ಡಿಜಿಟಲ್‌ ಡೆಸ್ಕ್‌:

ಎಳೆ ಮಕ್ಕಳ ಜೊತೆ ಮತಗಟ್ಟೆಗೆ ಬಂದು ವೋಟ್‌ ಮಾಡೋರನ್ನು ನೋಡಿದ್ದೀರಿ, ಆದರೆ ಇಲ್ಲೊಬ್ಬ ಮತದಾರ ಮಂಗನ ಜೊತೆ ಬಂದು ಮತ ಚಲಾವಣೆ ಮಾಡಿದ್ದಾನೆ.

ವಾರ್ಧಾದ ನಿವಾಸಿ ವಿನೋದ್‌ ಕ್ಷೀರಸಾಗರ್‌ ತನ್ನ ಸಾಕು ಮಂಗ ಭಜರಂಗ್‌ನ ಜೊತೆ ಮತಗಟ್ಟೆಗೆ ಆಗಮಿಸಿ ಹಕ್ಕು ಚಲಾಯಿಸಿದ್ದಾರೆ.

ಕಳೆದ 3 ತಿಂಗಳಿನಿಂದ ಭಜರಂಗ್ ನನ್ನೊಂದಿಗಿದೆ, ಬೀದಿ ನಾಯಿಗಳು ಅದರ ಮೇಲೆ ದಾಳಿ ಮಾಡಿತ್ತು. ನಾನು ವೈದ್ಯರ ಬಳಿ ಕರೆದುಕೊಂಡು ಹೋಗಿದ್ದೆ. 3 ಹೊಲಿಗೆ ಹಾಕಿದ್ದಾರೆ. ಭಜರಂಗ್‌ ನನ್ನನ್ನು ಬಿಟ್ಟು ಬೇರೆಯವರ ಬಳಿಗೆ ಹೋಗುವುದಿಲ್ಲ ಆದರೆ ನಾನು ಹೋದಲ್ಲೆಲ್ಲಾ ನನ್ನೊಂದಿಗೆ ಇರುತ್ತದೆ. ಮತ ಹಾಕುವಾಗಲೂ ನನ್ನ ಜೊತೆ ಇತ್ತು. ಇದರಿಂದ ಯಾರಿಗೂ ತೊಂದರೆ ಆಗಿಲ್ಲ ಎಂದಿದ್ದಾರೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!