Monday, March 27, 2023

Latest Posts

ಏಳು ತಿಂಗಳಲ್ಲಿ ಬರೋಬ್ಬರಿ 62 ಕೆ.ಜಿ ಇಳಿಸಿಕೊಂಡ ವ್ಯಕ್ತಿ, ತೂಕ ಇಳಿಸಿದ್ದು ಹೇಗೆ ಗೊತ್ತಾ?

ಹೊಸದಿಗಂತ ಡಿಜಿಟಲ್ ಡೆಸ್ಕ್:

ತೂಕ ಇಳಿಸೋದು ಸಾಕಷ್ಟು ಜನರ ಕನಸು, ಕಷ್ಟಪಟ್ಟು ತೂಕ ಇಳಿಸೋರಿಗೆ ಅರ್ಧ ಕೆ.ಜಿ. ಕಡಿಮೆಯಾದ್ರೂ ಖುಷಿ ವಿಷಯವೇ.

62 ಕೆ.ಜಿ ತೂಕವಿದ್ದು, ಸಣ್ಣ ಆಗಬೇಕು ಅನ್ನೋರ ಮಧ್ಯೆ ವ್ಯಕ್ತಿಯೊಬ್ಬ ಬರೀ ಏಳು ತಿಂಗಳಲ್ಲಿ 62 ಕೆ.ಜಿ. ತೂಕ ಕಡಿಮೆ ಮಾಡಿಕೊಂಡಿದ್ದಾನೆ. ಬ್ರಯಾನ್ ಒ ಕೆಫೆ ಎನ್ನುವವರು ಏಳು ತಿಂಗಳಲ್ಲಿ 62 ಕೆಜಿ ತೂಕ ಇಳಿಸಿದ್ದಾರೆ.

ಈ ಹಿಂದೆ ಮಾಡಿದ ಡಯಟ್‌ಗಳನ್ನು ಒಮ್ಮೆ ಅವಲೋಕಿಸಿ ನೋಡಿ, ಅಲ್ಲಿ ಏನು ತಪ್ಪಾಗಿದೆ ಯೋಚಿಸಿ, ಆ ತಪ್ಪು ಈ ಬಾರಿ ಆಗದಂತೆ ಗಮನ ಇಡಿ. ಮೊಬೈಲ್‌ನಲ್ಲಿ ಆಹಾರ ಆರ್ಡರ್ ಮಾಡುವ ಆಪ್‌ಗಳನ್ನು ಕಿತ್ತು ಬಿಸಾಕಿ. ವ್ಯಾಯಾಮವನ್ನು ಎಂಜಾಯ್ ಮಾಡಿ. ಕ್ಯಾಲೊರಿ ಇಳಿಕೆ ಸದಾ ಇರಲಿ ಎಂದು ಬ್ರಾಯನ್ ಹೇಳಿದ್ದಾರೆ.

ಇಷ್ಟವಾದ ತಿನಿಸು ಬಿಡೋದು ಕಷ್ಟ, ಅದರ ಜೊತೆಗೆ ನೀವು ಡಯಟ್ ಮಾಡಬೇಕು. ಕೆಟ್ಟ ಫುಡ್, ಒಳ್ಳೆ ಫುಡ್ ಎಂದು ಇರೋದಿಲ್ಲ. ಕ್ವಾಂಟಿಟಿ ಮುಖ್ಯ ಎಂದು ಬ್ರಾಯನ್ ಹೇಳಿದ್ದಾರೆ.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Latest Posts

Don't Miss

error: Content is protected !!