ಉಡುಪಿಯ ಕಡಿಯಾಳಿಯಲ್ಲಿ ರಸ್ತೆಗೆ ‘ಹಾಲಿನ ಅಭಿಷೇಕ’ ನಡೆಸಿದ ಪಿಕಪ್ ವಾಹನ!

ಹೊಸದಿಗಂತ ಡಿಜಿಟಲ್ ಡೆಸ್ಕ್:

ಅಪಘಾತ ತಪ್ಪಿಸಲು ಹೋದ ಪಿಕಪ್ ವಾಹನವೊಂದು ರಸ್ತೆ ಪಕ್ಕದಲ್ಲಿರಿಸಿದ್ದ ಹಾಲಿನ ಕ್ರೇಟ್‌ಗಳಿಗೆ ಡಿಕ್ಕಿಯಾಗಿ ರಸ್ತೆಯ ತುಂಬಾ ಹಾಲು ಚೆಲ್ಲಿದ ಘಟನೆ ಉಡುಪಿ ಜಿಲ್ಲೆಯ ಕಡಿಯಾಳಿಯಲ್ಲಿ ಇಂದು ನಸುಕಿಗೆ ನಡೆದಿದ್ದು, ಈ ಘಟನೆಯ ದೃಶ್ಯಾವಳಿಗಳು ಈಗ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿವೆ.

ಪ್ರಾಥಮಿಕ ಮಾಹಿತಿಗಳ ಪ್ರಕಾರ ಇಂದು ನಸುಕಿನ 4 ಗಂಟೆ ಸುಮಾರಿಗೆ ಈ ಘಟನೆ ನಡೆದಿದೆ. ವೇಗವಾಗಿ ಬರುತ್ತಿದ್ದ ಪಿಕ್‌ಅಪ್ ವಾಹನ ಬೈಕೊಂದಕ್ಕೆ ಡಿಕ್ಕಿಯಾಗುವುದನ್ನು ತಪ್ಪಿಸಲು ರಸ್ತೆ ಪಕ್ಕಕ್ಕೆ ಸರಿದಿದ್ದು, ಈ ವೇಳೆ ಅಲ್ಲಿ ಶೇಖರಿಸಿಟ್ಟಿದ್ದ ಹಾಲಿನ ಕ್ರೇಟ್‌ಗಳಿಗೆ ಡಿಕ್ಕಿಯಾಗಿದೆ. ಪರಿಣಾಮ ಹಾಲು ರಸ್ತೆಯ ತುಂಬಾ ಚೆಲ್ಲಿದೆ. ಈ ದೃಶ್ಯಾವಳಿಗಳು ಹಾಲಿನ ಬೂತ್‌ನಲ್ಲಿ ಅಳವಡಿಸಿರುವ ಸಿಸಿ ಕ್ಯಾಮರಾದಲ್ಲಿ ಸೆರೆಯಾಗಿದೆ.
ಇದೇ ಘಟನೆಯಲ್ಲಿ ಹಾಲಿನ ಬೂತ್‌ಗೂ ಒಂದಿಷ್ಟು ಹಾನಿಯಾಗಿದೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here