ಸಮುದ್ರದಲ್ಲಿ ನಿಂತು ಪರಶಿವನ ಕಾಣಬೇಕೇ? ಹಾಗಿದ್ರೆ ಬನ್ನಿ ಬನ್ನಿ ಮುರುಡೇಶ್ವರಕ್ಕೆ!

ಹೊಸದಿಗಂತ ಡಿಜಿಟಲ್ ಡೆಸ್ಕ್:

ರಾಜ್ಯದಲ್ಲಿಯೇ ಅತ್ಯಂತ ಉದ್ದದ ತೇಲುವ ಸೇತುವೆ ಹೊಂದುವ ಮೂಲಕ ಉತ್ತರ ಕನ್ನಡ ಜಿಲ್ಲೆಯ ಪ್ರವಾಸಿ ತಾಣ ಮುರುಡೇಶ್ವರ ಈಗ ಮತ್ತಷ್ಟು ತನ್ನ ಆಕರ್ಷಣೆ ಹೆಚ್ಚಿಸಿಕೊಂಡಿದೆ.

Murudeshwar - All You Need to Know BEFORE You Go (with Photos)ಅರಬ್ಬಿ ಸಮುದ್ರದ ಮೇಲೆ ಬರೋಬ್ಬರಿ 130 ಮೀಟರ್ ಉದ್ದ ತೇಲುತ್ತಿರುವ ಈ ಸೇತುವೆ ಸಮುದ್ರದಲ್ಲಿ ನಿಂತು ಬೃಹತ್ ಶಿವನ ಪ್ರತಿಮೆ, ಮುರುಡೇಶ್ವರ ದೇವಾಲಯದ ಸೌಂದರ್ಯವನ್ನು ಕಣ್ತುಂಬಿಕೊಳ್ಳಲು ಅವಕಾಶ ನೀಡುತ್ತಿದೆ.

Floating Bridge In Murudeshwara: ಉತ್ತರ ಕನ್ನಡದಲ್ಲೇ ಮೊದಲ ಬಾರಿಗೆ ಫ್ಲೋಟಿಂಗ್  ಬ್ರಿಡ್ಜ್ ಆರಂಭ - Ain Live Newsಈ ಸೇತುವೆಯು ಏಕಕಾಲದಲ್ಲಿ 110 ಜನರನ್ನು ಹಿಡಿದಿಟ್ಟುಕೊಳ್ಳುವ ಸಾಮರ್ಥ್ಯ ಹೊಂದಿದೆ. ಜೊತೆಗೆ ಯಾವುದೇ ಭಯವಿಲ್ಲದೆ ಇದರಲ್ಲಿ ವಿಹರಿಸಬಹುದು. ಏಕೆಂದರೆ ಯಾವುದೇ ಅಪಾಯ ಉಂಟಾದರೂ ತಕ್ಷಣ ರಕ್ಷಣೆಗಾಗಿ ಇಲ್ಲಿ ಪ್ರತೀ 100 ಪ್ರವಾಸಿಗರಿಗೆ 10 ಮಂದಿ ಜೀವರಕ್ಷಕರನ್ನು ನಿಯೋಜಿಸಲಾಗಿದೆ.

Murudeshwar – a dream destination for Shaivites – Bag Full of Mapsಸಮುದ್ರ ಎಷ್ಟೇ ಪ್ರಕ್ಷುಬ್ಧಗೊಂಡರೂ ಜಗ್ಗದೆ ಉಳಿಯುವ ಸಾಮರ್ಥ್ಯ ಇದಕ್ಕಿದ್ದು, ಸರ್ವಋತುವಿಗೂ ಹೊಂದುವಂತೆ ಇದನ್ನು ನಿರ್ಮಿಸಲಾಗಿದೆ. ಅಂದ ಹಾಗೆ ಮಲ್ಪೆ ಹಾಗೂ ಕೇರಳದ ಬಳಿಕ ಇದು ದೇಶದಲ್ಲಿ ಇದು ಮೂರನೇ ತೇಲುವ ಸೇತುವೆಯಾಗಿದೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!