ಮುಂಬೈಗೆ ಬಂದಿಳಿಯಿತು ಫ್ರಾನ್ಸ್ ವಶದಲ್ಲಿದ್ದ ಭಾರತೀಯರಿರುವ ವಿಮಾನ

ಹೊಸದಿಗಂತ ಡಿಜಿಟಲ್ ಡೆಸ್ಕ್:

ಮಾನವ ಕಳ್ಳಸಾಗಣೆ ಆರೋಪದ ಮೇಲೆ ಪ್ಯಾರಿಸ್ ವಶದಲ್ಲಿದ್ದ ಭಾರತೀಯರಿದ್ದ ವಿಮಾನ ಮುಂಬೈಗೆ ಬಂದು ಇಳಿದಿದೆ.

ಮಾನವಕಳ್ಳಸಾಗಣ ಆರೋಪದ ಮೇಲೆ ಒಟ್ಟಾರೆ 270 ಭಾರತೀಯರಿದ್ದ ವಿಮಾನವನ್ನು ಬಂಧಿಯಾಗಿರಿಸಿಕೊಳ್ಳಲಾಗಿತ್ತು. ನಾಲ್ಕು ದಿನಗಳಿಂದ ನಿಲ್ದಾಣದಲ್ಲಿದ್ದ ವಿಮಾನ ಇದೀಗ ಮುಂಬೈ ತಲುಪಿದೆ.

ವಿಮಾನದಲ್ಲಿದ್ದ ಪ್ರಯಾಣಿಕರಲ್ಲಿ 50 ಮಂದಿ ಫ್ರಾನ್ಸ್‌ನಲ್ಲಿಯೇ ಆಶ್ರಯಪಡೆಯಲು ಬಯಸಿದ್ದಾರೆ. ಹೀಗಾಗಿ ಅವರನ್ನು ಅಲ್ಲಿಯೇ ಬಿಟ್ಟು ಬರಲಾಗಿದೆ. ಇನ್ನು ಕೆಲ ಪ್ರಯಾಣಿಕರು ವಾಪಾಸಾಗಲು ಇಚ್ಛೆ ಪಡದ ಕಾರಣ ಕೆಲವರನ್ನು ಅಲ್ಲಿಯೇ ಬಿಟ್ಟು ವಿಮಾನ ಫ್ರಾನ್ಸ್‌ನಿಂದ ಮುಂಬೈಗೆ ಬಂದು ಇಳಿದಿದೆ. ಒಟ್ಟಾರೆ ಎಷ್ಟು ಮಂದಿ ವಿಮಾನದಲ್ಲಿದ್ದಾರೆ ಎನ್ನುವ ಖಚಿತ ಮಾಹಿತಿ ಲಭ್ಯವಾಗಿಲ್ಲ.

ವಿಮಾನವು ತೈಲ ತುಂಬಿಸಿಕೊಳ್ಳಲು ಫ್ರಾನ್ಸ್‌ನ ವತ್ರಿ ವಿಮಾನ ನಿಲ್ದಾಣದಲ್ಲಿ ನಿಲ್ಲಿಸಿತ್ತು. ಈ ವೇಳೆ ಮಾನವ ಕಳ್ಳಸಾಗಾಣಿಕೆಯ ಬಲಿಪಶುಗಳ ಅದರಲ್ಲಿದ್ದಾರೆ ಎಂದು ಫ್ರೆಂಚ್ ಅಧಿಕಾರಿಗಳಿಗೆ ಮಾಹಿತಿ ಸಿಕ್ಕಿತ್ತು. ಈ ಕಾರಣದಿಂದ ಟೇಕಾಫ್ ತಡೆಹಿಡಿದು ಪರಿಶೀಲನೆ ಮಾಡಲಾಗಿತ್ತು. ಪರಿಶೀಲನೆ ಬಳಿಕ ಪುನರಾರಂಭಕ್ಕೆ ಅನುಮತಿ ನೀಡಲಾಗಿದೆ.

ವಿಮಾನದಲ್ಲಿದ್ದವರಿಗೆ ಊಟ, ತಿಂಡಿ, ಮಕ್ಕಳಿಗೆ ಶಿಕ್ಷಣ ಕೊಡಲು ಶಿಕ್ಷಕರನ್ನೂ ಫ್ರಾನ್ಸ್ ನೇಮಿಸಿತ್ತು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!