ಅಮೆಝಾನ್ ಕಾಡಿನಲ್ಲಿ ವಿಮಾನ ಪತನ, ನಾಲ್ಕು ಮಕ್ಕಳು ಬದುಕಿರುವುದೇ ಪವಾಡ!

ಹೊಸದಿಗಂತ ಡಿಜಿಟಲ್ ಡೆಸ್ಕ್:

ವಿಮಾನ ಪತನ ಎನ್ನುವ ಸುದ್ದಿ ಕೇಳಿದರೆ ಯಾರೂ ಬದುಕುಳಿಯಲು ಸಾಧ್ಯವೇ ಇಲ್ಲ ಎನ್ನುವಂಥ ಮನಸ್ಥಿತಿ ಇರುತ್ತದೆ. ಆದರೆ ಎರಡು ವಾರದ ಹಿಂದೆ ಕೊಲಂಬಿಯಾದ ಅಮೆಝಾನ್ ದಟ್ಟ ಕಾಡಿನಲ್ಲಿ ವಿಮಾನ ಪತನವಾಗಿದ್ದು, 4 ಮಕ್ಕಳು ತಮ್ಮ ಜೀವವನ್ನು ಉಳಿಸಿಕೊಂಡಿದ್ದಾರೆ.

Amazon | Places | WWFಅಪಘಾತದಲ್ಲಿ ಜೀವ ಉಳಿಸಿಕೊಂಡ ಮಕ್ಕಳಲ್ಲಿ 11 ತಿಂಗಳ ಮಗು ಕೂಡ ಇದೆ, ಇವರು ಎರಡು ವಾರಗಳ ಕಾಲ ಅರಣ್ಯ ಪ್ರಾಣಿಗಳಿಂದ ತಮ್ಮ ಪ್ರಾಣವನ್ನು ರಕ್ಷಿಸಿಕೊಂಡಿರುವುದು ಪವಾಡವೇ ಸರಿ.

This handout picture released by the Colombian Army shows a crashed plane in the forest at a rural area of the municipality of Solano, department of Caqueta, Colombia on May 16, 2023/AFPPixವಿಮಾನ ಪತನವಾದಾಗಿನಿಂದಲೂ ಮಿಲಿಟರಿ ಜನರ ರಕ್ಷಣೆಗೆ ಮುಂದಾಗಿದ್ದು, ಸತತ ಹುಡುಕಾಟ ನಡೆಸಿತ್ತು, ಸತತ ಪ್ರಯತ್ನದಿಂದ ಮಕ್ಕಳನ್ನು ಪತ್ತೆ ಮಾಡಲಾಗಿದೆ. ಮೇ.1ರಂದು ವಿಮಾನ ಪತನವಾಗಿತ್ತು.

Human activity degraded more than a third of remaining Amazon forest: Study - The Weekವಿಮಾನ ಪತನದಲ್ಲಿ ಮೃತಪಟ್ಟ ರಾನೋಕ್ ಅವರ ನಾಲ್ಕು ಮಕ್ಕಳು ದಟ್ಟ ಅರಣ್ಯದಲ್ಲಿ ಬದುಕುಳಿದಿದ್ದಾರೆ. 11 ತಿಂಗಳ ಮಗು, 13 ವರ್ಷ, 9 ವರ್ಷ ಹಾಗೂ ನಾಲ್ಕು ವರ್ಷದ ಮಕ್ಕಳು ಪವಾಡಸದೃಶರಾಗಿ ಉಳಿದಿದ್ದಾರೆ.

ಸುತ್ತಮುತ್ತ ಬಿದ್ದಿದ್ದ ಕೋಲುಗಳನ್ನು ಬಳಸಿ ಮಕ್ಕಳು ಮನೆಯ ಆಕಾರವನ್ನು ಮಾಡಿಕೊಂಡಿದ್ದರು. ಇದನ್ನು ಕಂಡ ಮಿಲಿಟರಿ ಯಾರೋ ಬದುಕಿದ್ದಾರೆ ಎಂದು ತಿಳಿಸಿತ್ತು. ಸ್ಥಳಕ್ಕೆ ಹೋಗಿ ನೋಡಿದಾಗ ಹಾಲಿನ ಬಾಟಲಿ, ಹಣ್ಣುಗಳ ತುಂಡು ಪತ್ತೆಯಾಗಿತ್ತು.

ಮಿಲಿಟರಿ ಮಕ್ಕಳನ್ನು ರಕ್ಷಿಸಿದ್ದು, ಆಸ್ಪತ್ರೆಗೆ ದಾಖಲಿಸಲಾಗಿದೆ. ಪೈಲಟ್ ಹಾಗೂ ಇನ್ನಿತರ ಎರಡು ಮೃತದೇಹಗಳನ್ನು ಪತ್ತೆಮಾಡಲಾಗಿದೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!