ರಾಹುಲ್ ಗಾಂಧಿ ಪ್ರಚಾರದ ವೇಳೆ ಕುಸಿದ ಬಿದ್ದ ವೇದಿಕೆ

ಹೊಸದಿಗಂತ ಡಿಜಿಟಲ್‌ ಡೆಸ್ಕ್‌: 

ಬಿಹಾರದ ಪಾಲಿಗಂಜ್‌ನಲ್ಲಿ ಕಾಂಗ್ರೆಸ್​​​ ನಾಯಕ ರಾಹುಲ್​​ ಗಾಂಧಿ ಪ್ರಚಾರ ರ್ಯಾಲಿ ಮಾಡುತ್ತಿರುವ ವೇಳೆ ವೇದಿಕೆಯ ಒಂದು ಭಾಗ ಕುಸಿದಿದೆ.

ಈ ವೇಳೆ ಪಕ್ಷ ನಾಯಕರು ಹಾಗೂ ಪಾಟ್ಲಿಪುತ್ರ ಲೋಕಸಭೆ ಕ್ಷೇತ್ರದ ಆರ್​​ಜೆಡಿ ಅಭ್ಯರ್ಥಿ ಮಿಸಾ ಭಾರತಿ ಧಾವಿಸಿದ್ದಾರೆ. ಈ ಘಟನೆಯಿಂದ ಯಾರಿಗೂ ತೊಂದರೆ ಆಗಿಲ್ಲ ಎಂದು ಹೇಳಲಾಗಿದೆ. ಈ ರ್ಯಾಲಿ ತೇಜಸ್ವಿ ಯಾದವ್ ಕೂಡ ಭಾಗವಹಿಸಿದರು.

https://x.com/PTI_News/status/1795038726986322245?ref_src=twsrc%5Etfw%7Ctwcamp%5Etweetembed%7Ctwterm%5E1795038726986322245%7Ctwgr%5Ee98948ecd62387e41a0bd9870085e2373eaaeef4%7Ctwcon%5Es1_&ref_url=https%3A%2F%2Ftv9kannada.com%2Fnational%2Fbihar-as-rahul-gandhi-was-coming-the-platform-collapsed-a-missed-disaster-national-news-akp-839521.html

ಈ ಘಟನೆಯಿಂದ ಅಲ್ಲಿ ಕೆಲವೊಂದು ಗಂಟೆಗಳ ಕಾಲ ಗೊಂದಲ ಉಂಟಾಗಿದೆ. ನಂತರ ರಾಹುಲ್​​ ಗಾಂಧಿ ಅವರನ್ನು ಭದ್ರತಾ ಸಿಬ್ಬಂದಿ ವೇದಿಕೆಯಿಂದ ಕೆಳಗಿಸಿದ್ದಾರೆ.

ವೇದಿಕೆ ಸರಿಗೊಂಡ ನಂತರ ರಾಹುಲ್​​ ಗಾಂಧಿ ತಮ್ಮ ಭಾಷಣ ಮುಂದುವರಿಸಿದರು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!