ಹೊಸದಿಗಂತ ವರದಿ ಸಕಲೇಶಪುರ:
ಹಲ್ಲೆಗೊಳಗಾಗಿ ಠಾಣೆಯಲ್ಲಿ ದೂರು ನೀಡಲು ತೆರಳಿದ ಅಮಾಯಕನ ಮೇಲೆ ಏಕಾಏಕಿ ಕಪಾಳ ಮೋಕ್ಷ ಮಾಡಿ ಜಾತಿ ನಿಂದನೆ ಮಾಡಿರುವ ಹಾಸನ ಅಪಾರ ಪೊಲೀಸ್ ವರಿಷ್ಠಾಧಿಕಾರಿ ತಮ್ಮಯ್ಯ ಅವರು ಕ್ರಮಗೈಗೊಳ್ಳಬೇಕು ಎಂದು ತಾಲೂಕು ಬಜರಂಗದಳ ಕಾರ್ಯಕರ್ತರು ಹಾಸನ ಜಿಲ್ಲಾ ಪೋಲಿಸ್ ವರಿಷ್ಠಾಧಿಕಾರಿ ಮಹಮ್ಮದ್ ಸುಜೀತಾ ಅವರಿಗೆ ನೀಡಿದರು
ಈ ಸಂಧರ್ಭದಲ್ಲಿ ಮಾತನಾಡಿದ ಕಾರ್ಯಕರ್ತರು ಸಕಲೇಶಪುರ ಗ್ರಾಮಾಂತರ ಠಾಣಾ ವ್ಯಾಪ್ತಿಯ ದೆಖಲ ಗ್ರಾಮದಲ್ಲಿ ಕೆಲ ಮುಸ್ಲಿಂ ಯುವಕರಿಂದ ಕಲ್ಲರಳ್ಳಿ ಗ್ರಾಮದ ರವಿ ಎಂಬುವವರ ಮೇಲೆ ಅ.29 ರಂದು ಮಾರಣಾಂತಿಕವಾಗಿ ಹಲ್ಲೆ ಮಾಡಿ ಅವರ ಬಾಡಿಗೆ ಕಾರನ್ನು ಜಖಂ ಮಾಡಿದ್ದರು. ನಂತರ ಸರ್ಕಾರಿ ಕ್ರಾಪರ್ಡ್ ಆಸ್ಪತ್ರೆಯಲ್ಲಿ ರವಿ ದಾಖಲಾಗಿ ಚಿಕಿತ್ಸೆ ಪಡೆಯುತ್ತಿದ್ದರು. ಸ್ನೇಹಿತ ರವಿ ಅವರ ಆರೋಗ್ಯ ವಿಚಾರಿಸಲು ಬಂದಿದ್ದ ಬಜರಂಗದಳ ತಾಲೂಕಿನ ಸಹ ಸಂಚಾಲಕ್
ಶಿವು( ಜಿಪ್ಪಿ) ಅವರ ಮೇಲೆ ರವಿಗೆ ಹಲ್ಲೆ ಮಾಡಿದ ಅದೇ ಗುಂಪಿನ ಯುವಕರು ಶಿವು ಮೇಲು ಸಹ ಆಸ್ಪತ್ರೆಯ ತುರ್ತು ನಿಗಾ ಘಟಕದಲ್ಲಿ ಹಲ್ಲೆ ಮಾಡಿದ್ದಾರೆ ಎಂದರು.
ಈ ಕುರಿತು ನಗರ ಠಾಣೆಯಲ್ಲಿ ದೂರು ನೀಡಲು ತೆರಳಿದ ಬಜರಂಗದಳ ತಾಲೂಕಿನ ಸಹಸಂಚಾಲಕ್ ಶಿವು (ಜಿಪ್ಪಿ) ಮೇಲೆ ರಾತ್ರಿ 10:20ರ ಸುಮಾರಿಗೆ ನಗರ ಠಾಣೆಗೆ ಆಗಮಿಸಿದ್ದ ಹಾಸನ ಜಿಲ್ಲಾ ಅಪರ ವರಿಷ್ಠಾಧಿಕಾರಿ ತಮ್ಮಯ್ಯ ವಾಸ್ತವತೆ ವಿಚಾರಿಸದೆ ಏಕಾಏಕಿ ಕಪಾಳಮೋಕ್ಷ ಮಾಡಿ ಜಾತಿ ನಿಂದಿಸಿ ಇವನ ಮೇಲೆ ಪ್ರಕರಣ ದಾಖಲಿಸಿ ಎಂದು ಅವಾಚ್ಯ ಶಬ್ದಗಳಿಂದ ನಿಂದಿಸಿದ್ದಾರೆ ಎಂದು ಕಾರ್ಯಕರ್ತರು ಆರೋಪಿಸಿದರು.
ಅಧಿಕಾರ ದುರುಪಯೋಗ ಪಡಿಸಿಕೊಂಡು ದರ್ಪ ಮೆರೆದಿರುವ ಅಪಾರ ವರಿಷ್ಠಾಧಿಕಾರಿ ತಮ್ಮಯ್ಯ ಅವರ ಮೇಲೆ ತನಿಖೆ ಮಾಡಿ ಸೂಕ್ತ ಕ್ರಮ ಜರುಗಿಸಬೇಕು. ಮತ್ತು ಇಲಾಖಾ ತನಿಖೆಗೆ ಆದೇಶಿಸಬೇಕು ಎಂದು ವಿಶ್ವ ಹಿಂದೂ ಪರಿಷತ್ ಮತ್ತು ಬಜರಂಗದಳದ ನೂರಾರು ಕಾರ್ಯಕರ್ತರು ಮನವಿ ಮಾಡಿದರು.
ಮನವಿ ಸ್ವೀಕರಿಸಿದ ಜಿಲ್ಲಾ ಪೋಲಿಸ್ ವರಿಷ್ಠಾಧಿಕಾರಿ
ಮಹಮ್ಮದ್ ಸುಜೀತಾ ಅವರು ಮಾತನಾಡಿ, ಯಾವುದೇ ವಿಷಯದಲ್ಲಿ ಪೋಲಿಸರು ನಿಮ್ಮೊಂದಿಗೆ ಇರುತ್ತಾರೆ. ನೀವು ಪೋಲಿಸರ ಸಹಾಯ ಪಡೆದು ಸಮಾಜದ ಒಳಿತಿಗಾಗಿ ಕೆಲಸ ಮಾಡಬೇಕು. ಕಾನೂನನ್ನು ಕೈಗೆತ್ತಿಕೊಳ್ಳಬಾರದು. ಮತ್ತು ಯಾವುದೇ ಅಧಿಕಾರ ಪೋಲಿಸ್ ನಿಮಗೆ ಸ್ಪಂದಿಸದಿದ್ದಲ್ಲಿ ನನ್ನನು ಬೇಟಿ ಮಾಡಿ ಕಾನೂನಿನ ಅಡಿಯಲ್ಲಿ ಪರಿಹರಿಸಲಾಗುವುದು ಎಂದು ಹೇಳಿದರು.