ಹೊಸದಿಗಂತ ವರದಿ,ಮಂಡ್ಯ:
ಕ್ಲುಲ್ಲಕ ಕಾರಣಕ್ಕೆ ಇಬ್ಬರು ಸ್ನೇಹಿತರ ನಡುವೆ ಗಲಾಟೆಯಾಗಿ ಕೊಲೆಯಲ್ಲಿ ಅಂತ್ಯವಾಗಿರುವ ಘಟನೆ ಸ್ನೇಹಿತರ ದಿನದಂದೇ ತಾಲ್ಲೂಕಿನ ಕೀಲಾರ ಗ್ರಾಮದಲ್ಲಿ ಭಾನುವಾರ ನಡೆದಿದೆ.
ಕೀಲಾರ ಗ್ರಾಮದ ಜಯಂತ್(23) ಎಂಬುವವನೇ ಕೊಲೆಯಾಗಿದ್ದು, ಕೀರ್ತಿ ಎಂಬುವವನು ಚಾಕುವಿನಿಂದ ಇರಿದು ಕೊಲೆ ಮಾಡಿರುವುದಾಗಿ ತಿಳಿದು ಬಂದಿದೆ.
ಕೀಲಾರ ಗ್ರಾಮದ ವರ್ಕ್‌ಶಾಪ್ ಹತ್ತಿರ ಮಾತಿಗೆ ಮಾತು ಬಳೆಸಿದ ಈ ಇಬ್ಬರು ಸ್ನೇಹಿತರಾದ ಜಯಂತ್ ಮತ್ತು ಕೀರ್ತಿ ಎಂಬುವವರು ಜಗಳ ತಾರಕ್ಕೇರಿದೆ. ಇದರಿಂದ ರೊಚ್ಚಿಗೆದ್ದ ಕೀರ್ತಿ ಎಂಬುವವನು ಜಯಂತ್‌ಗೆ ಚಾಕುವಿನಿಂದ ಇರಿದಿದ್ದಾನೆ, ರಕ್ತದ ಮಡುವಿಲ್ಲಿ ನರಳಾಡುತ್ತಿದ್ದ ಜಯಂತ್‌ನನ್ನು ಸ್ಥಳೀಕರು ಆಸ್ಪತ್ರೆಗೆ ಕರೆದೊಯ್ಯಲು ನಿರತರಾದಾಗ ಸ್ಥಳದಲ್ಲಿಯೇ ಮೃತ ಪಟ್ಟಿದ್ದಾನೆ.
ಜಿಲ್ಲಾಸ್ಪತ್ರೆಯ ಶವಾಗಾರದಲ್ಲಿ ಮೃತ ದೇಹವಿದ್ದು, ಈ ಸಬಂಧ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.