ಹೊಸ ದಿಗಂತ ಡಿಜಿಟಲ್ ಡೆಸ್ಕ್:
ಕಾಂಗ್ರೆಸ್ ಹಿರಿಯ ನಾಯಕ ಆರ್ ವಿ ದೇಶಪಾಂಡೆ ಸಿದ್ದರಾಮಯ್ಯ ಅನುಮತಿ ಕೊಟ್ಟರೆ ನಾನು ಸಿಎಂ ಆಗುತ್ತೇನೆ ಎಂಬ ಹೇಳಿಕೆ ನೀಡಿದ್ದರು. ಇದಕ್ಕೆ ಸಚಿವ ಜಮೀರ್ ಅಹಮದ್ ಖಾನ್ ಸಿಎಂ ಕುರ್ಚಿಯಲ್ಲಿ ಸದ್ಯ ಟಗರು ಕುಳಿತಿದೆ, ಅದನ್ನು ಕೆಳಗಿಳಿಸೋದು ಬಹಳ ಕಷ್ಟ ಎಂದು ತಿಳಿಸಿದ್ದಾರೆ.
ಹಾವೇರಿಯಲ್ಲಿ ಈ ಕುರಿತು ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ನನಗೂ ಸಿಎಂ ಆಗುವ ಆಸೆ ಇದೆ ಎಂಬ ಆರ್.ವಿ ದೇಶಪಾಂಡೆ ಹೇಳಿಕೆ ವಿಚಾರವಾಗಿ ಜಮೀರ್ ಟಾಂಗ್ ನೀಡಿದ್ದು, ಸಿಎಂ ಆಗುವ ಆಸೆ ಎಲ್ಲರಿಗೂ ಇರುತ್ತದೆ. ಆದರೆ ಸದ್ಯ ಕುರ್ಚಿ ಕಾಲಿ ಇಲ್ಲ. ಸಿಎಂ ಕುರ್ಚಿಯಲ್ಲಿ ನಮ್ಮ ಟಗರು ಕುಳಿತುಕೊಂಡಿದೆ. ಕುರ್ಚಿಯಿಂದ ಟಗರು ಇಳಿಸುವುದು ಬಹಳ ಕಷ್ಟ. ಟಗರು ಕೊಂಬು ಮುರಿಯಲು ಸಾಧ್ಯವಿಲ್ಲ. ಟಗರು ಟಗರೆ ಎಂದು ಹಾವೇರಿಯಲ್ಲಿ ಸಚಿವ ಜಮೀರ್ ಅಹ್ಮದ್ ಖಾನ್ ಹೇಳಿಕೆ ನೀಡಿದರು.