ಹುಬ್ಬಳ್ಳಿಯ ರೋಟರಿ ಕ್ಲಬ್‌ನಲ್ಲೊಂದು ಅಪರೂಪದ ಅದ್ಧೂರಿ ಮದುವೆ

ಹೊಸದಿಗಂತ ವರದಿ ಹುಬ್ಬಳ್ಳಿ:

ಇಲ್ಲಿಯ ಪತ್ರಕರ್ತ ನಗರದ ಸರಕಾರಿ ರಾಜ್ಯ ಮಹಿಳಾ ನಿಲಯ ಆಶ್ರಯ ಪಡೆದಿದ್ದ ಇಬ್ಬರ ಅನಾಥ ಮಹಿಳೆಯರ ವಿಹಾಹವನ್ನು ರೋಟರಿ ಕ್ಲಬ್ ಆಫ್ ಹುಬ್ಬಳ್ಳಿ ಅವರ ಸಹಯೋಗದಲ್ಲಿ ಅದ್ದೂರಿಯಾಗಿ ಮಾಡಲಾಯಿತು.
ನಿಲಯದಲ್ಲಿ ಆಶ್ರಯ ಪಡೆದಿದ್ದ ತನು ಹಾಗೂ ಬೆಳಗಾವಿಯ ಸುಳೆಬಾವಿಯ ಮಂಜುನಾಥ ಉಪರಿ, ಆರತಿ ಕಾಶಿದಾಮ ಹಾಗೂ ಸವದತ್ತಿಯ ಯಲ್ಲಪ್ಪ ಇಂಚಲ ಹಿರಿಯ ಸಮ್ಮುಖದಲ್ಲಿ ದಾಂಪತ್ಯ ಜೀವನಕ್ಕೆ ಕಾಲಿಟ್ಟರು.
ನೇಕಾರಿಕಾ ಸ್ವಂತ ಉದ್ಯಮ ಮಾಡುತ್ತಿರುವ ಮಂಜುನಾಥ ಹಾಗೂ ಟ್ಯಾಕ್ಸಿ ಏಜೆನ್ಸಿ ನಡೆಸುತ್ತಿರುವ ಯಲ್ಲಪ್ಪ ಮಹಿಳೆಯರಿಬ್ಬರ ಬಾಳಿಗೆ ಬೆಳಕಾಗಿದ್ದಾರೆ.

ಈ ಇಬ್ಬರು ದಂಪತಿಗಳ ವಿವಾಹ ಸಮಾರಂಭದ ಕಾರಣ ಮಹಿಳಾ ನಿಲಯದಲ್ಲಿ ಸಂಭ್ರಮ ಮನೆ ಮಾಡಿತ್ತು. ಹಿಂದೂ ಸಮುದಾಯದ ಸಂಪ್ರದಾಯದಂತೆ ಸಕಲ ಶಾಸ್ತ್ರೋಕ್ತವಾಗಿ ಮದುವೆ ಮಾಡಲಾಯಿತು. 18 ರಿಂದ 85 ವರ್ಷ ನವರು 60 ಕ್ಕೂ ಹೆಚ್ಚು ಮಹಿಳೆಯರು ಇಲ್ಲಿ ಆಶ್ರಯ ಪಡೆದಿದ್ದಾರೆ. ಇವರಿಗೆ ಪುನರ್ವಸತಿ, ಶಿಕ್ಷಣ, ಉದ್ಯೋಗ ಹಾಗೂ ಮದುವೆ ಮಾಡಿಕೊಡಲಾಗುತ್ತದೆ. ಮದುವೆಯಾದ ಮಹಿಳೆಯರಿಗೆ ಸರ್ಕಾರದಿಂದ 20 ಸಾವಿರ ಪ್ರೋತ್ಸಾಹ ಧನ ಬರುತ್ತದೆ. ಅದನ್ನು ಬ್ಯಾಂಕಿನಲ್ಲಿ ಮಹಿಳೆ ಹಾಗೂ ನಿಲಯದ ಅಧೀಕ್ಷಕರ ಹೆಸರಿನಲ್ಲಿ ಎಫ್ ಡಿ ಇಡಲಾಗುವುದು. ಮೂರು ವರ್ಷದ ಬಳಿಕ ಮಹಿಳೆಗೆ ಹಿತದೃಷ್ಟಿಗೆ ಆ ಹಣವನ್ನು ನೀಡಲಾಗುತ್ತದೆ ಎಂದು ಮಹಿಳಾ ನಿಲಯದ ಅಧೀಕ್ಷಕರಾದ ಶಾರದ ನಾಡಗೌಡ ತಿಳಿಸಿದರು.

ಸರಕಾರಿ ರಾಜ್ಯ ಮಹಿಳಾ ನಿಲಯಕ್ಕೆ ಪ್ರಯೋಜ‌ನವಾಗುವಂತ ಅಗತ್ಯ ವಸ್ತುಗಳ ನೀಡುವ ಉದ್ದೇಶವಿತ್ತು. ಆದರೆ ಈ ಮಹಿಳೆಯರ ಮದುವೆ ಇರುವುದು ತಿಳಿದು ರೋಟರಿ ಕ್ಲಬ್ ವತಿಯಿಂದ ಕೈಲಾದ ಸಹಾಯ ಮಾಡಿದ್ದೇವೆ ಎಂದು ರೋಟರಿ ಕ್ಲಬ್ ಆಫ್ ಹುಬ್ಬಳ್ಳಿ ಅಧ್ಯಕ್ಷ ಜಿತೇಶ ಪಾಂಚಾಲ ತಿಳಿಸಿದರು.
ವಿವಾಹ ಸಮಾರಂಭದಲ್ಲಿ ರೋಟರಿ ಕ್ಲಬ್ ಸಂವಹನ ಸೇವಾ ನಿರ್ದೇಶಕ ರಿಯಾಜ್ ಬಸಿರ, ಕ್ಲಬ್ ನಿರ್ದೇಶಕ ಹೇಮಾಲ ಶಾ, ಕಾರ್ಯದರ್ಶಿ ಮೋಹಿತ್ ಡಿ., ಉದ್ಯಮಿ ಎಂ.ವಿ. ಕರಮರಿ ಇದ್ದರು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!