ದಿಗಂತ ವರದಿ ಕಲಬುರಗಿ:
ಲೋಕಸಭಾ ಚುನಾವಣೆ ಕಾವಿನ ಜೊತೆ ಜೊತೆಗೆ, ರಾಜ್ಯಾದ್ಯಂತ ಬಿಸಿಲಿನ ತಾಪ ಹೆಚ್ಚಾಗಿದ್ದು, ಇಂದು ಕಲಬುರಗಿಯಲ್ಲಿ ದಾಖಲೆಯ ಪ್ರಮಾಣದ ತಾಪಮಾನ ದಾಖಲಾಗಿದೆ.
ಜಿಲ್ಲೆಯ ಕಾಳಗಿ ತಾಲೂಕಿನ ಹೋಬಳಿಯಲ್ಲಿ ಗರಿಷ್ಠ 47.7 ಡಿಗ್ರಿ ಸೆಲ್ಸಿಯಸ್ ತಾಪಮಾನ ದಾಖಲಾಗಿದ್ದು, ಜಿಲ್ಲಾಡಳಿತ, ಆರೋಗ್ಯ ಇಲಾಖೆ ಬಿಸಿಲಿನಿಂದ ರಕ್ಷಣೆ ಪಡೆಯಲು ಮಾರ್ಗ ಸೂಚಿ ಬಿಡುಗಡೆ ಮಾಡಿದೆ.