ದಿಗಂತ ವರದಿ ವಿಜಯಪುರ:
ಬಿಜೆಪಿ ರೈತ ಮೋರ್ಚಾ ರಾಜ್ಯಾಧ್ಯಕ್ಷ, ಮಾಜಿ ಶಾಸಕ ಎ.ಎಸ್. ಪಾಟೀಲ ನಡಹಳ್ಳಿ ಅವರು ತಮ್ಮ ಸ್ವಗ್ರಾಮವಾದ ಜಿಲ್ಲೆಯ ಮುದ್ದೇಬಿಹಾಳ ತಾಲೂಕಿನ ನಡಹಳ್ಳಿಯ ಶಾಲೆಯ ಮತಗಟ್ಟೆಯಲ್ಲಿ ಕುಟುಂಬ ಸಮೇತರಾಗಿ ಮತದಾನ ಮಾಡಿ ಹಕ್ಕು ಚಲಾಯಿಸಿದರು.
ಪತ್ನಿ ಮಹಾದೇವಿ, ಪುತ್ರರಾದ ಭರತ್, ಶರತ್ ಅವರು ಮತದಾನಕ್ಕಾಗಿಯೇ ಬೆಂಗಳೂರಿನಿಂದ ಆಗಮಿಸಿ, ಮತದಾನ ಮಾಡಿದರು.
ಈ ವೇಳೆ ಎ.ಎಸ್. ಪಾಟೀಲ ನಡಹಳ್ಳಿ ಸುದ್ದಿಗಾರರೊಂದಿಗೆ ಮಾತನಾಡಿ, ದೇಶದಲ್ಲಿ ಮೋದಿ ಅಲೆ ಇದೆ. ಮೂರನೇ ಬಾರಿ ಮೋದಿಯವರು ಪ್ರಧಾನಿ ಆಗುವುದು ನಿಶ್ಚಿತ. ಕಾಂಗ್ರೆಸ್ ಗ್ಯಾರಂಟಿ ಯೋಜನೆ ಘೋಷಿಸಿ ದೇಶವನ್ನು ಆರ್ಥಿಕವಾಗಿ, ಧಾರ್ಮಿಕವಾಗಿ ಹಾಳು ಮಾಡತೊಡಗಿದೆ. ದೇಶದ ಅಭಿವೃದ್ಧಿಗೆ ಈಗಿನ ಕಾಂಗ್ರೆಸ್ ನೀತಿಗಳು ಮಾರಕವಾಗಿವೆ ಎಂದರು.