Sunday, August 14, 2022

Latest Posts

ಬಾಹ್ಯಾಕಾಶಕ್ಕೆ ಜಿಗಿಯಲು ಸಜ್ಜಾಗಿದೆ ವಿದ್ಯಾರ್ಥಿನಿಯರು ತಯಾರಿಸಿದ ಸ್ಯಾಟಲೈಟ್!

ಹೊಸದಿಗಂತ ಡಿಜಿಟಲ್ ಡೆಸ್ಕ್:

ದೇಶದ 75 ಶಾಲೆಗಳ 750 ವಿದ್ಯಾರ್ಥಿನಿಯರು ಸೇರಿ ತಯಾರಿಸಿರುವ ಪುಟಾಣಿ ಉಪಗ್ರಹವೊಂದು ಉಡಾವಣೆಗೆ ಸಜ್ಜಾಗುತ್ತಿದೆ!
ಈ ಉಪಗ್ರಹವು ಕೇವಲ ಎಂಟು ಕೆ.ಜಿ ತೂಕ ಹೊಂದಿದ್ದು, ತನ್ನದೇ ಸೌರ ಫಲಕ, ದೀರ್ಘ ವ್ಯಾಪ್ತಿಯ ಸಂವಹನ ಸಲಕರೆಣೆ, ಸೆಲ್ಫಿ ಕ್ಯಾಮೆರಾವನ್ನು ಒಳಗೊಂಡಿದೆ. ಇದರ ಜೀವಿತಾವಧಿ ಮಾತ್ರ ಆರು ತಿಂಗಳುಗಳಾಗಿವೆ.

ವಿಶ್ವಸಂಸ್ಥೆಯ ’ಬಾಹ್ಯಾಕಾಶದಲ್ಲಿ ಮಹಿಳೆಯರು’ ಎಂಬ ವಿಷಯದ ಆಧಾರದಲ್ಲಿ ವಿಜ್ಞಾನ, ತಂತ್ರಜ್ಞಾನ, ಎಂಜಿನಿಯರಿಂಗ್ ಮತ್ತು ಗಣಿತ ಕ್ಷೇತ್ರದಲ್ಲಿ ಮಹಿಳೆಯರಿಗೆ ಉತ್ತೇಜನ ನೀಡುವ ಉದ್ದೇಶದಿಂದ ಈ ಉಪಗ್ರಹ ನಿರ್ಮಾಣವಾಗಿದೆ ಎಂದು ಮುಖ್ಯ ತಂತ್ರಜ್ಞಾನ ಅಧಿಕಾರಿ ರಿಫಾತ್ ಶಾರೂಕ್ ತಿಳಿಸಿದ್ದಾರೆ.

75ನೇ ಸ್ವಾತಂತ್ರ್ಯೋತ್ಸವದ ಸ್ಮರಣಾರ್ಥ ಈ ಉಪಗ್ರಹವು ಮುಂದಿನ ತಿಂಗಳ ಆರಂಭದಲ್ಲಿ ಇಸ್ರೋನ ಸಣ್ಣ ಉಪಗ್ರಹ ಉಡಾವಣೆ ನೌಕೆ ಎಸ್‌ಎಸ್‌ಎಲ್‌ವಿ ಮೂಲಕ ಉಡಾವಣೆಯಗಲಿದೆ.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss