84 ವರ್ಷಗಳ ಬಳಿಕ ಪತ್ತೆಯಾಯ್ತು ವಿಶ್ವಯುದ್ಧ ಸಮಯದಲ್ಲಿ ಮುಳುಗಿದ್ದ ಹಡಗು

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌

ಎರಡನೇ ವಿಶ್ವಯುದ್ಧದ ಸಮಯದಲ್ಲಿ ಸಮುದ್ರದಲ್ಲಿ ಮುಳುಗಿದ್ದ ಹಡಗೊಂದು 84 ವರ್ಷಗಳ ನಂತರ ಪತ್ತೆಯಾಗಿದೆ.

ದಕ್ಷಿಣ ಚೀನಾ ಸಮುದ್ರವೆಂದು ಕರೆಸಿಕೊಳ್ಳುವ ಫಿಲಿಪ್ಪೀನ್ಸ್‌ನ ಲುಝಾನ್‌ ದ್ವೀಪದ ಸಮುದ್ರದ ಆಳದಲ್ಲಿ ಆಸ್ಟ್ರೇಲಿಯಾದ 864 ಯೋಧರೊಂದಿಗೆ ಮುಳುಗಿದ್ದ ಜಪಾನಿನ ವ್ಯಾಪಾರಿ ಹಡಗು ಪತ್ತೆಯಾಗಿದೆ. 13,123 ಅಡಿಗೂ ಅಧಿಕ ಆಳದಲ್ಲಿ ಈ ಹಡಗು ಕಂಡುಬಂದಿದೆ.

864 ಯೋಧರನ್ನು ಬಲಿಪಡೆದಿದ್ದ ಈ ಘಟನೆ, ಆಸ್ಟ್ರೇಲಿಯಾದ ಅತಿದೊಡ್ಡ ಸಮುದ್ರ ದುರಂತ ಎಂದು ಕರೆಯಲಾಗಿತ್ತು. ಇದೀಗ ಹಡಗು ಪತ್ತೆಯಾಗಿದ್ದು, ಆಸ್ಟ್ರೇಲಿಯಾದ ಕಡಲ ದುರಂತ ಅಂತ್ಯ ಕಂಡಿದೆ ಎಂದು ಆಸ್ಟ್ರೇಲಿಯಾದ ರಕ್ಷಣಾ ಸಚಿವ ರಿಚರ್ಡ್‌ ಮಾರ್ಲ್ಸ್‌ ಹೇಳಿದ್ದಾರೆ.

1942, ಜುಲೈ ತಿಂಗಳಲ್ಲಿ ಪಪುವಾ ನ್ಯೂಗಿನಿಯದಿಂದ ಚೀನಾದ ಹೈನಾನ್‌ಗೆ ಹೊರಟಿದ್ದ ಹಡಗು ಅಮೆರಿಕದ ಸಬ್‌ಮರಿನ್‌ವೊಂದರ ಟಾಪೆಡೊ ದಾಳಿಗೆ ತುತ್ತಾಗಿತ್ತು. ಇದು ವ್ಯಾಪಾರಿ ಹಡಗಾಗಿದ್ದರೂ ಯುದ್ಧ ಕಾರ್ಯಾಚರಣೆಗಳಿಗೂ ಬಳಸಲಾಗುತ್ತಿತ್ತು. ಈ ಘಟನೆಯಲ್ಲಿ ಯುದ್ಧ ಖೈದಿಗಳು, ಹಲವು ರಾಷ್ಟ್ರಗಳ ನಾಗರಿಕಲು ಸೇರಿ ಸಾವಿರಕ್ಕೂ ಅಧಿಕ ಜನ ಸಾವಿಗೀಡಾಗಿದ್ದರು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!