ಹೊಸದಿಗಂತ ಡಿಜಿಟಲ್ ಡೆಸ್ಕ್:
ಬಾಂಗ್ಲಾದೇಶದ ಪ್ರಸ್ತುತ ಪರಿಸ್ಥಿತಿಯ ಕುರಿತು, ಶಿವಸೇನಾ (ಯುಬಿಟಿ) ನಾಯಕಿ ಪ್ರಿಯಾಂಕಾ ಚತುರ್ವೇದಿ ಕಳವಳ ವ್ಯಕ್ತಪಡಿಸಿದ್ದಾರೆ.
“ಬಾಂಗ್ಲಾದೇಶದಲ್ಲಿನ ಅಶಾಂತಿಯು ಭಾರತದ ಮೇಲೂ ಪರಿಣಾಮ ಬೀರುತ್ತದೆ. ಬಾಂಗ್ಲಾದೇಶ ನಮ್ಮ ನೆರೆಯ ದೇಶ, ಮತ್ತು ಅಲ್ಲಿ ಯಾವುದೇ ಅರಾಜಕತೆ ನಮ್ಮ ಮೇಲೆ ಪರಿಣಾಮ ಬೀರಬಹುದು. ನಾವು ಬಾಂಗ್ಲಾದೇಶದಿಂದ ಭಾರತೀಯರನ್ನು ಮರಳಿ ಕರೆತರುವುದು ಮತ್ತು ಅಶಾಂತಿ ಭಾರತಕ್ಕೆ ಹರಡುವುದನ್ನು ತಡೆಯಲು ನಮ್ಮ ಗಡಿಗಳನ್ನು ಹೇಗೆ ಭದ್ರಪಡಿಸುವುದು ಎಂದು ಪರಿಗಣಿಸಿ” ಎಂದು ತಿಳಿಸಿದ್ದಾರೆ.