Thursday, February 9, 2023

Latest Posts

ಫಿಫಾ ಫುಟ್‍ಬಾಲ್ ಫೈನಲ್ ಗೆ ಲಗ್ಗೆ ಇಟ್ಟ ಫ್ರಾನ್ಸ್ ಗೆ ಶಾಕ್: ಆಟಗಾರರಿಗೆ ಕಾಡುತ್ತಿದೆ ವೈರಸ್!

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌

ಫಿಫಾ ಫುಟ್‍ಬಾಲ್ ವಿಶ್ವಕಪ್‌ನ ನ ಫೈನಲ್‍ಗೆ ಎಂಟ್ರಿಕೊಟ್ಟಿರುವ ಫ್ರಾನ್ಸ್ ತಂಡಕ್ಕೆ ವೈರಸ್ ಕಾಟ ಶುರುವಾಗಿದೆ.

ಈಗಾಗಲೇ ವಿಶ್ವಕಪ್ ಫೈನಲ್ ಹಂತಕ್ಕೆ ಫ್ರಾನ್ಸ್ ಮತ್ತು ಅರ್ಜೆಂಟಿನಾ ತಂಡಗಳು ಲಗ್ಗೆ ಇಟ್ಟಿವೆ. ಡಿ.18 ಭಾನುವಾರ ಫೈನಲ್ ಪಂದ್ಯ ನಡೆಯಲಿದೆ. ಅದಕ್ಕಾಗಿ ಎರಡು ತಂಡಗಳು ಸತತ ಅಭ್ಯಾಸವನ್ನು ಕೂಡ ಮಾಡುತ್ತಿದೆ.

ಆದ್ರೆ ಇದೀಗ ಫೈನಲ್ ಪಂದ್ಯವಾಡಲು ಸಿದ್ಧವಾಗುತ್ತಿರುವ ಫ್ರಾನ್ಸ್ ತಂಡಕ್ಕೆ ವೈರಸ್ ಕಾಟ ಕೊಡುತ್ತಿದೆ. 5 ಮಂದಿ ಆಟಗಾರರು ವಿಪರೀತ ಶೀತದಿಂದ ಬಳಲುತ್ತಿದ್ದು, ಅಭ್ಯಾಸದಿಂದ ಹೊರಗುಳಿದಿದ್ದಾರೆ.

ರಾಫೆಲ್ ವರಾನೆ, ಇಬ್ರಾಹಿಂ ಕೋನಾಟೆ, ದಯೋಟ್ ಉಪಮೆಕಾನೊ, ಆಡ್ರಿಯನ್ ರಾಬಿಯೊಟ್ ಮತ್ತು ಕಿಂಗ್ಸ್ಲಿ ಕೋಮನ್ ಸೇರಿ ಐವರು ಅಸ್ವಸ್ಥಗೊಂಡು ತಂಡದಿಂದ ದೂರ ಉಳಿದಿದ್ದಾರೆ. ಇನ್ನು ದಯೋಟ್ ಉಪಮೆಕಾನೊ, ಆಡ್ರಿಯನ್ ರಾಬಿಯೊಟ್ ಮತ್ತು ಕಿಂಗ್ಸ್ಲಿ ಕೋಮನ್ ಮೂವರಿಗೆ ಅನಾರೋಗ್ಯ ಕಾಡಿತ್ತು. ಹಾಗಾಗಿ ಈಗಾಗಲೇ ಈ ಐವರ ಮೇಲೆ ತಂಡದ ಆರೋಗ್ಯ ಸಿಬ್ಬಂದಿ ಹೆಚ್ಚಿನ ನಿಗಾ ವಹಿಸಿ ಚಿಕಿತ್ಸೆ ನೀಡುತ್ತಿದ್ದಾರೆ.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Latest Posts

Don't Miss

error: Content is protected !!