July 23, 2026
Thursday, July 23, 2026
spot_img

ನಮ್ಮ ಮೆಟ್ರೋ ಪ್ರಯಾಣಿಕರಿಗೆ ಜೇಬು ಸುಡುವ ಸುದ್ದಿ: BMRCLನಿಂದ ಕಾದಿದ್ಯಾ ಹೊಸ ಶಾಕ್?

ಹೊಸದಿಗಂತ ಡಿಜಿಟಲ್ ಡೆಸ್ಕ್:

ರಾಜಧಾನಿ ಬೆಂಗಳೂರಿನ ಸಾರಿಗೆ ವ್ಯವಸ್ಥೆಯ ಜೀವನಾಡಿಯಾಗಿರುವ ‘ನಮ್ಮ ಮೆಟ್ರೋ’ ಪ್ರಯಾಣಿಕರಿಗೆ ಬಿಎಂಆರ್‌ಸಿಎಲ್ (BMRCL) ಮತ್ತೆ ಶಾಕ್ ನೀಡಲು ಸಜ್ಜಾಗಿದೆ. ಈ ಹಿಂದೆ ಸಾರ್ವಜನಿಕರ ತೀವ್ರ ವಿರೋಧದಿಂದಾಗಿ ತಡೆಹಿಡಿಯಲಾಗಿದ್ದ ದರ ಹೆಚ್ಚಳವನ್ನು, ಇದೀಗ ನೂತನ ನಿಯಮದಡಿ ಜಾರಿಗೆ ತರಲು ದರ ನಿಗದಿ ಸಮಿತಿ ಶಿಫಾರಸ್ಸು ಮಾಡಿದೆ.

ವಾರ್ಷಿಕ ಏರಿಕೆ ಬದಲು 3 ವರ್ಷಕ್ಕೊಮ್ಮೆ ರಿವಿಷನ್?

2025ರ ಆರಂಭದಲ್ಲಿ ಮೆಟ್ರೋ ಶೇ. 71ರಷ್ಟು ದರ ಏರಿಕೆ ಮಾಡಿದಾಗ ವ್ಯಾಪಕ ಆಕ್ರೋಶ ವ್ಯಕ್ತವಾಗಿತ್ತು. ಆ ಬಳಿಕ ಶೇ. 5ರಷ್ಟು ದರ ಕಡಿತಗೊಳಿಸಿ, ಪ್ರತಿವರ್ಷ ಫೆಬ್ರವರಿಯಲ್ಲಿ ಶೇ. 5ರಷ್ಟು ವಾರ್ಷಿಕ ಏರಿಕೆ ಮಾಡಲು FFC ಸೂಚಿಸಿತ್ತು. ಆದರೆ, 2026ರ ಫೆಬ್ರವರಿಯಲ್ಲಿ ಜಾರಿಯಾಗಬೇಕಿದ್ದ ಈ ಹೆಚ್ಚಳವನ್ನು ಸಾರ್ವಜನಿಕರ ಹಿತದೃಷ್ಟಿಯಿಂದ ಸ್ಥಗಿತಗೊಳಿಸಲಾಗಿತ್ತು. ಪ್ರಸ್ತುತ, ಪ್ರತಿವರ್ಷ ದರ ಹೆಚ್ಚಿಸುವ ಬದಲು ಪ್ರತಿ 3 ವರ್ಷಕ್ಕೊಮ್ಮೆ ಒಟ್ಟಾರೆಯಾಗಿ ದರ ಏರಿಕೆ ಮಾಡುವ ಹೊಸ ಪ್ರಸ್ತಾವನೆಯನ್ನು ಬಿಎಂಆರ್‌ಸಿಎಲ್ ಮುಂದಿಟ್ಟಿದೆ.

ಒಟ್ಟಿನಲ್ಲಿ, ಸಾರ್ವಜನಿಕ ಹಿತವನ್ನು ಬದಿಗೊತ್ತಿ ಕೈಗೊಳ್ಳಲಾಗುವ ಈ ದರ ಹೆಚ್ಚಳದ ನಿರ್ಧಾರ ಸಾಲು ಸಾಲು ಸಾಲದ ಹೊರೆಯಲ್ಲಿದ್ದ ಜನಸಾಮಾನ್ಯರ ಜೇಬಿಗೆ ದೊಡ್ಡ ಕತ್ತರಿ ಹಾಕುವುದರಲ್ಲಿ ಸಂಶಯವಿಲ್ಲ.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !