ಹೊಸದಿಗಂತ ಡಿಜಿಟಲ್ ಡೆಸ್ಕ್:
ಉತ್ತರಪ್ರದೇಶದ ಬಾಲಾಪರಾಧಿ ಗೃಹದಲ್ಲಿ ಆಘಾತಕಾರಿ ಘಟನೆಯೊಂದು ನಡೆದಿದೆ. ಆಗ್ರಾದ ಬಾಲಾಪರಾಧಿಗೃಹದಲ್ಲಿ ಸರ್ಕಾರಿ ಅಧಿಕಾರಿಗಳೇ ಮಕ್ಕಳನ್ನು ಮಂಚಕ್ಕೆ ಕಟ್ಟಿ, ಚಪ್ಪಲಿಯಿಂದ ಥಳಿಸಿದ್ದಾರೆ.
ಮಹಿಳಾ ಅಧೀಕ್ಷಕರು ಮಕ್ಕಳಿಗೆ ಚಪ್ಪಲಿಯಲ್ಲಿ ಹೊಡೆದ ವಿಡಿಯೋ ಎಲ್ಲೆಡೆ ವೈರಲ್ ಆಗಿದೆ. ಸಿಸಿಟಿವಿ ಫೂಟೇಜ್ ಇದಾಗಿದೆ. ಒಂದು ಕೋಣೆಯಲ್ಲಿ ಆರು ಮಕ್ಕಳು ಹಾಸಿಗೆ ಮೇಲೆ ಮಲಗಿದ್ದು, ಕೋಣೆಗೆ ಮೇಲ್ವಿಚಾರಕರು ಬರುತ್ತಾರೆ. ಮಕ್ಕಳ ಮೇಲೆ ಏಕಾಏಕಿ ಹಲ್ಲೆ ನಡೆಸಿದ್ದಾರೆ, ಚಪ್ಪಲಿಯಿಂದ ಹೊಡೆದು, ಕೆನ್ನೆಗೆ ಬಾರಿಸಿದ್ದಾರೆ.
https://x.com/Arv_Ind_Chauhan/status/1701609757306745154?s=20